ಖುಬಾ ಮಸೀದಿಯಲ್ಲಿ ಇಂದು ಖಲ್ಖಾ-ಎ-ಝಿಕೀರ್

 

ಕೊಪ್ಪಳ:ಫೆ-  ನಗರದ ಕುಷ್ಟಗಿ ರಸ್ತೆಯಲ್ಲಿರುವ ಖುಬಾ ಮಸೀದಿಯಲ್ಲಿ ಇಂದು ದಿನಾಂಕ:೧೫ ರಂದು ಗುರುವಾರ ರಾತ್ರಿ ೮-೩೦ಕ್ಕೆ ಇಶಾ ನಮಾಝಿನ ಬಳಿಕ ಮಾಸಿಕ ಖಲ್ಖಾ-ಎ-ಝಿಕೀರ (ಖಾದ್ರಿಯಾ ಚಿಸ್ತಿಯಾ) ನಡೆಯಲಿದೆ ಎಂದು ಖುಬಾ ಮಸೀದಿಯ ಧಾರ್ಮಿಕ ಮುಖಂಡ ಖಾಜಾವಲಿ ಬಿಸ್ತಿ ತಿಳಿಸಿದ್ದಾರೆ.

ಮಸೀದಿಯ ಇಮಾಮ ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ನಗರ ಘಟಕದ ಗೌರವಾಧ್ಯಕ್ಷರಾದ ಮೌಲಾನಾ ಮುಹಮ್ಮದ ಅಬುಲ್ ಹಸನ್ ಖಾಜಿ ಅವರ ನೇತೃತ್ವದಲ್ಲಿ ಜರುಗಲಿದ್ದು, ಸುನ್ನಿ ಸ್ಟೂಡೆಂಟ್ಸ್ ಫೆಡರೆಷನ್ ನಗರ ಘಟಕದ ಅಧ್ಯಕ್ಷ ಹಾಗೂ ಮರ್ದಾನಅಲಿ ಮಸೀದಿಯ ಇಮಾಮ ಹಾಫೀಸ್ ಮುಹಮ್ಮದ ಜಮಾಲ್ ಅಹ್ಮದ್, ಇಲಾಹಿ ಮಸೀದಿ ಇಮಾಮ್ ಹಾಫೀಸ್ ಇಸ್ಮಾಯಿಲ್ ರಜ್ವಿ, ಅಬೂಬಕರ ಮಸೀದಿ ಇಮಾಮ ಮೌಲಾನಾ ಜಹುರ ಅಹ್ಮದ್, ಮೌಲಾನಾ ಆಲಂ ಬಾಷಾ, ಹಾಫೀಸ್ ಮೋಯಿದ್ದೀನ್ ಬಡೆಘರ್, ಹಾಫೀಸ್ ಜಮೀರ್ ಅಹ್ಮದ್, ರಫಾತುಲ್ಲಾ ಚೌದ್ರಿ, ಸುನ್ನಿ ಯುವಜನ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಸಲೀಮುದ್ದೀನ್ ಅಲ್ವಿ ಮುಂತಾದವರು ಭಾಗವಹಿಸಲಿರುವರು. ಕೊನೆಯಲ್ಲಿ ಖುಬಾ ಮಸೀದಿಯ ವ್ಯವಸ್ಥಾಪಕ ಕಮೀಟಿಯ ಅಧ್ಯಕ್ಷ ಹಾಜಿ ಇಬ್ರಾಹಿಮ್‌ಸಾಬ ಅವರಿಂದ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಖಾಜಾವಲಿ ಬಿಸ್ತಿ    ತಿಳಿಸಿದ್ದಾರೆ.