ಖಾಸಗಿ ಶಾಲೆಗಳ ಪಾತ್ರ ಮಹತ್ವವಾಗಿದೆ -ರಾಘವೇಂದ್ರ ಪಾನಗಂಟಿ

Koppal ಹೈ-ಕ ಭಾಗ ಶೈಕ್ಷಣಿಕವಾಗಿ ಇತ್ತಿಚಿನ ದಿನ ಮಾನಗಳಲ್ಲಿ ಮುಂದುವರೆದ ಜಿಲ್ಲೆಗಳ ಸಾಲಿಗೆ ಬರುತ್ತಿರುವುದ ಕ್ಕೆ ಖಾಸಗಿ ಶಾಲೆಗಳ ಪಾತ್ರ ಮಹತ್ವವಾಗಿದೆ ಎಂದು ಹೈ-ಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ರಾಘವೇಂದ್ರ ಪಾನಗಂಟಿ ಹೇಳಿದರು.
ಅವರು ನಗರದ ಬಿ.ಎಸ್. ಜಿ.ಎಸ್ ಟ್ರಸ್ಟನ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಯ “ದಶಮಾನೋತ್ಸವ“ ಕಾರ್ಯಕ್ರಮ ಉದ್ಘಾಟಿಸಿ ಮಾ ತನಾಡಿದರು.
ಶಾಲೆಗಳ ಮುಖ್ಯಸ್ಥರಿಗೆ ದೇಶಕ್ಕೆ ಏನಾದರು ಕೊಡುಗೆ ನೀಡಬೇಕು ಎನ್ನುವ ಮನೋ ಭಾವ, ಸೇವಾ ಮನೋಭಾವ ಇದ್ದವರು ಮಾತ್ರ ಸಂದ್ಥೆಗಳನ್ನು ತೆರೆಯಲು ಸಾಧ್ಯ. ಅಂತಹ ಕೆಲ ಸವನ್ನು ಶಾಂತಿನಿಕೇತನ ಶಾಲೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಾ ಲ್ಗೊಂಡು ಮಾತನಾಡಿದ ಜಾನ ಪದ ಕಲಾವಿದ ಜೀವನಸಾಬ ಬಿನ್ನಾಳ ಪಠ್ಯದ ಜೋತೆ ಸಾಹಿ ತ್ಯ, ಸಂಗೀತ, ಕಲರ, ನೃತ್ಯ ಮುಂತಾದ ಪ್ರಕಾರಗಳನ್ನು ಕಲಿ ಸಬೇಕು ಆ ಕೆಲಸವನ್ನು ಶಾಲೆ ಮಾಡುತ್ತಿದೆ. ಮಾತೃ ಭಾಷೆ ಜೋತೆಗೆ ಇಂಗ್ಲಿಷ್ ಸಹ ಕಲಿ ಯಬೇಕು ಅಂದಾಗ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಬಿ.ಎಸ್.ಜಿ.ಎಸ್ ಟ್ರಸ್ಟನ ಅಧ್ಯಕ್ಷ ಶಿವಕುಮಾರ ಕುಕನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾ ತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ನಗ ರಸ ಭೆ ಸದಸ್ಯರಾದ ಮಲ್ಲಪ್ಪ ಕವ ಲೂರ, ರಾಜಶೇಖರಗೌಡ ಆಡೂರ, ಭರಮಗೌಡ ಗೆಜ್ಜಿ, ರಾಯನಗೌಡ ಆಡೂರ, ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ರೇ ಖಾ ಈಳಿಗೇರ, ಟ್ರಸ್ಟನ ಪ್ರಧಾನ ಕಾರ್ಯದರ್ಶಿ ಖಾಜಾವಲಿ ಕುದರಿಮೋತಿ ಪಾಲ್ಗೊಂಡಿ ದ್ದರು. ಶಾಲೆಯ ಮುಖ್ಯೋಪಾ ಧ್ಯಯ ಕೋಟ್ರಯ್ಯ ಸಾಲಿಮಠ ನಿರೂಪಿಸಿದರು. ಶಿಕಷಕ ಶಿವಾ ನಂದ ವಂದಿಸಿದರು.
ಬೆಳಿಗ್ಗೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾರದಾ ಇಂಟರನ್ಯಾಷನಲ್ ಶಾಲೆಯ ಮುಖ್ಯಸ್ಥರಾದ ವಿ. ಆರ್.ಪಾಟೀಲ, ಸಿ.ಆರ್.ಪಿಗ ಳಾದ ಶರಣಪ್ಪ ರಡ್ಡೆರ್, ಸತೀಶ, ಮುಸ್ತಫಾ ಕುದರಿಮೋತಿ, ಚಂ ದ್ರಪ್ಪ ಉಲ್ಲತ್ತಿ, ಶಂಕರಪ್ಪ ಗೆಜ್ಜಿ, ಸಂಗಪ್ಪ ಹೂಗಾರ, ಸಂತೋಷ ದೇಶಪಾಂಡೆ, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.