ಖಡಕ್ ಡಿಸಿ ಸುನೀಲ್ ಕುಮಾರ್ ಹೊಡೆತಕ್ಕೆ ಕಂಗಾಲಾದ ಅಧಿಕಾರಿಗಳು

Koppal News ಬರದನಾಡು ಕೊಪ್ಪಳದಲ್ಲಿ ಈಗ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರ ಜಪವನ್ನು ಸರ್ಕಾರಿ ಅಧಿಕಾರಿಗಳು ಹಗಲು ರಾತ್ರಿ ಮಾಡುವಂತಾಗಿದೆ. ಡಿಸಿ ಅವರ ಕಾರ್ಯವೈಖರಿ ನೋಡಿ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ. ಎಲ್ಲಿ, ಯಾವಾಗ, ಯಾವ ಟೈಮ್ ಲ್ಲಿ ಡಿಸಿ ಕಚೇರಿಗೆ ಭೇಟಿ ನೀಡುತ್ತಾರೋ ಗೊತ್ತಿಲ್ಲ. ಅಷ್ಟೊಂದು ಆ್ಯಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಖಡಕ್ ಕೆಲಸ ನೋಡಿ ಜನರು ನೇರವಾಗಿ ಡಿಸಿಗೆ ದೂರುಗಳನ್ನು ನೀಡುತ್ತಿದ್ದಾರೆ. ಇದನ್ನು ಅರಿತ ಡಿಸಿ ಸುನೀಲ್ ಕುಮಾರ ಇಂದು ಜನಸಂಪರ್ಕ ಸಭೆಯನ್ನು ಆರಂಭಿಸಿದ್ದು, ಪ್ರಥಮ ಸಭೆಯನ್ನು ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದ್ದಾರೆ. ಈ ಜನಸಂಪರ್ಕ ಸಭೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆಸಲಿದ್ದಾರೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಸಮ್ಮುಖ ಮತ್ತು ತಾಲೂಕ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನೇರವಾಗಿ ಜನರಿಂದ ದೂರು ಸ್ವೀಕರಿಸಿ, ಸಭೆಯಲ್ಲಿಯೇ ಜನರ ದೂರಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.

ಯಾವ ಯಾವ ಇಲಾಖೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಾರ್ವಜನಿಕರ ಸಮಸ್ಯೆಗಳಿ ಪರಿಹಾರ ನೀಡುತ್ತಿದ್ದಾರೆ ಎಂಬುದು ಈ ಸಭೆಯ ಉದ್ದೇಶವಾಹಿದೆ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಲ್ಲಿ ಸ್ಥಳದಲ್ಲಿಯೇ ಅಧಿಕಾರಿಗಳ ಚಳಿ ಬಿಡಿಸುವ ಕೆಲಸ ಮಾಡುತ್ತಿದ್ದಾರೆ.
ಒಟ್ಟಾರೆ ಜನಸಂಪರ್ಕ ಸಭೆಯಿಂದ ಅಧಿಕಾರಿಗಳು ತಬ್ಬಿಬ್ಬು ಆಗಿದ್ದು, ಎಚ್ಚೆತ್ತು ಕೊಂಡಿದ್ದಾರೆ.

Please follow and like us:
error