ಕ್ಷೇತ್ರದ ನೀರಾವರಿಗೆ ಹೆಚ್ಚಿನ ಆದ್ಯತೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿ ಗ್ರಾಮಗಳಾದ ಬೂದಿಹಾಳ, ಡಂಬ್ರಳ್ಳಿ ಹಾಗೂ ಹಿರೇಸಿಂದೋಗಿ ಗ್ರಾಮದಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.15 ಕೋಟಿಯ ಬ್ರಿಡ್ಜ್ ಕಂ ಬ್ಯಾರೇಜ್, ಚೆಕ್ ಡ್ಯಾಂ ಮತ್ತು ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಈ ಭಾಗದ ರೈತರ ಬಹುದಿನಗಳ ಕನಸಾದ ಬೂದಿಹಾಳ ಮತ್ತು ಡಂಬ್ರಳ್ಳಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕನಸು ನನಸಾಗಿದೆ. ಅಣ್ಣಾ ಹಜಾರೆಯವರೇ ನೀರಾವರಿ ಅಭಿವೃದ್ಧಿಗೆ ನನಗೆ ಮಾದರಿಯಾಗಿದ್ದು, ಹರಿಯುವ ನೀರನ್ನು ನಿಲ್ಲಿಸಿ ನಿಂತ ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹೆಚ್ಚು ಸಹಕಾರಿಯಾಗುತ್ತದೆ. ಬರುವ ದಿನಗಳಲ್ಲಿ ಬೋಚನಹಳ್ಳಿ, ಕಾತರಕಿ-ಗುಡ್ಲಾನೂರ, ಹ್ಯಾಟಿ-ಗೊಂಡಬಾಳ ಗ್ರಾಮಗಳ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಯೋಜನೆಗಳನ್ನು ರೂಪಿಸಲಾಗುವದು. ರೂ.2 ಲಕ್ಷ 90 ಕೋಟಿಯ ಬಜೆಟ್ ಮಂಡಣೆ ಮಾಡಿರುವ ರಾಜ್ಯ ಮುಖ್ಯಮಂತ್ರಿಗಳು ಯುವಕರಿಗೆ, ರೈತರಿಗೆ, ಮಹಿಳೆಯರಿಗೆ, ವಿದ್ರ್ಯಾರ್ಥಿಗಳಿಗೆ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ. ತಲಂಗಾಣ ರಾಜ್ಯ ಬಿಟ್ಟರೆ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಒಣಬೇಸಾಯ ರೈತರಿಗೆ ನೇರ ಸಹಾಯಧನ ಸೌಲಭ್ಯ ನೀಡಿದ್ದು ಕಾಂಗ್ರೆಸ್ ಸರಕಾರ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕಲ್ಪಿಸಿದ್ದು ಕೊಪ್ಪಳದ ಸಾರ್ವಜನಿಕ ಆಸ್ಪತ್ರೆಗೆ 450 ಹಾಸಿಗೆಯ ಆಸ್ಪತ್ರೆಯ ಉನ್ನತೀಕರಣಕ್ಕೆ 100 ಕೋಟಿ ಅನುದಾನ ಮಂಜೂರಾಗಿದ್ದು ಕೊಪ್ಪಳದ ಜನತೆಗೆ ಮಲ್ಟಿಸ್ಪೆಶಾಲಿಟಿ ಸೌಲಭ್ಯಗಳು ಲಭ್ಯವಾಗಲಿವೆ. ಈಗಾಗಲೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರೂ.2250 ಕೋಟಿ ಅನುದಾನ ಬಿಡುಗಡೆಯಾಗಿದ್ದು ಮಾರ್ಚ ಮೊದಲ ವಾರದಲ್ಲಿಯೇ ರೂ.188 ಕೋಟಿಯ ನವಲ್‍ಕಲ್-ಬಹದ್ದೂರಬಂಡಿ ಏತನೀರಾವರಿಗೆ ಅಡಿಗಲ್ಲು ನೆರವೇರಿಸಲಾಗುವುದು. ಈಗಾಗಲೆ ರೂ.80 ಕೋಟಿಯ ಹಣ ಮಂಜೂರಾಗಿದ್ದು ಕೊಪ್ಪಳ ಹಾಗೂ ಯಲಬುರ್ಗಾ ಕ್ಷೇತ್ರದ ಕೆರೆಗಳ ತುಂಬಿಸುವ ಕಾಮಗಾರಿಗೆ ರೂ.265 ಕೋಟಿ ಹಣ ಬಿಡುಗಡೆಯಾಗಿದೆ. ಬರುವ ವಿಧಾನಸಭಾ ಚುನವಣೆಯ ಸಮೀಕ್ಷೆಗಳು ಹೊರಹೊಮ್ಮಿದ್ದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವು ಅಧಿಕಾರ ಪಡೆಯಲಿದ್ದು ಕ್ಷೇತ್ರದ ಜನತೆ ಅಭಿವೃದ್ಧಿಯ ಜೊತೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎ.ಪಿ.ಎಂ.ಸಿ. ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ಮಾಜಿ ಕೆ.ಎಂ.ಎಫ್. ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಯಂಕಣ್ಣ ಕೊಳ್ಳಿ, ಮುಖಂಡರುಗಳಾದ ಈಶಪ್ಪ ಮಾದಿನೂರ, ಯತ್ನಟ್ಟಿ ನಿಂಗಪ್ಪ, ವಿರುಪಾಕ್ಷಗೌಡ್ರ, ಗಾಳೆಪ್ಪ ಪೂಜಾರ, ಕೃಷ್ಣಾರಡ್ಡಿ ಗಲಿಬಿ, ಬಸವರಡ್ಡೆಪ್ಪ ಹಳ್ಳಿಕೇರಿ, ಬಸವರಡ್ಡಿ ಕರಡ್ಡಿ, ರಾಮನಗೌಡ್ರ, ಯಲ್ಲನಗೌಡ್ರ, ಅಂದಪ್ಪ ನಾಯಕ, ರಾಜಪ್ಪ ಕಾತರಕಿ, ಶಿವಪ್ಪ ಬೂದಿಹಾಳ, ಷಣ್ಮುಖರಡ್ಡಿ, ವಿದ್ಯಾ ಗೌಡ್ರ, ಹರೀಶ ರಡ್ಡಿ ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error