ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ, ಯಾರಿಗೂ ದ್ರೋಹ ಬಗೆದಿಲ್ಲ -ಶಾಸಕ ಇಕ್ಬಾಲ್ ಅನ್ಸಾರಿ 

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಸಾಕಷ್ಟು ಸ್ಪಂದಿಸಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಯ ಎರಡನೇ ಬೆಳೆಗೆ ನೀರೊದಗಿಸುವ ಕಾರ್ಯವನ್ನು ಸರಾಗವಾಗಿ ನಡೆಸಿಕೊಟ್ಟರು.
ಯಾವುದೇ ಜಾತಿ,ವರ್ಗಗಳಿಗೆ ಸೀಮಿತವಾಗದೇ ಎಲ್ಲರಿಗೂ ಸಮಾನವಾಗಿ ಕಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸೌಹಾರ್ದತೆ ,ಕೋಮು ಸಾಮರಸ್ಯ ಕದಡಿ, ಕಲಹ ಸೃಷ್ಟಿಸುವ ಶಕ್ತಿಗಳನ್ನು ನಿಗ್ರಹಿಸುವ ಕಾರ್ಯವನ್ನು ಜಿಲ್ಲೆಯ ಪೊಲೀಸರು, ಜಿಲ್ಲಾಧಿಕಾರಿ ಗಳು ಸಮರ್ಥವಾಗಿ ಶ್ರಮಿಸಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು ೬೨೦ ಕೋಟಿ ರೂ.ಗಳ ಅನುದಾನ ಮುಖ್ಯಮಂತ್ರಿಗಳು ನೀಡಿರುವದು ಸಾಮಾನ್ಯ ಸಂಗತಿಯಲ್ಲ. ಈ ಭಾಗದಲ್ಲಿ ನಿರಂತರವಾಗಿ ಆನೆಗೊಂದಿ ಹಾಗೂ ಕನಕಗಿರಿ ಉತ್ಸವಕ್ಕಾಗಿ ಶಾಶ್ವತ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನೇರ ನಡೆ ನುಡಿಗೆ ಹೆಸರಾಗಿರುವ ಮುಖ್ಯಮಂತ್ರಿಗಳ ಮನೋಭಾವ ಮೆಚ್ಚಿ ಅವರೊಂದಿಗೆ ಗುರುತಿಸಿಕೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ, ಯಾರಿಗೂ ದ್ರೋಹ ಬಗೆದಿಲ್ಲ ಎಂದರು.

Please follow and like us:
error

Related posts