ಕ್ಷಮಗುಣವನ್ನು ಪತ್ರಿಯೊಬ್ಬರು ಅಳವಡಿಸಿಕೊಳ್ಳಬೇಕು- ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ:೨೬,ಕ್ಷೇತ್ರದ ಮುನಿರಾಬಾದ್ ಹಾಗೂ ಬಂಡಿಹರ್ಲಾಪುರ ಗ್ರಾಮದಲ್ಲಿ ಅಂದಾಜು ಮೊತ್ತ ರೂ.೮೮ ಲಕ್ಷದ ಅನುದಾನದಲ್ಲಿ ನಿರ್ಮಾಣಗೊಂಡ ಇಸಿ ಚರ್ಚ ಉದ್ಘಾಟಿಸಿ ಬಳಿಕ ಮಾತನಾಡಿದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ದಯೆಯೇ ಕರುಣೆ ಸಕಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಜೀವನ ನಡೆಸುವುದು ಏಸುವಾಣಿಯಾಗಿದೆ. ಏಸುಸ್ಮರಣೆಯಿಂದ ಸಕಲ ಸಮಸ್ಯೆಗಳು ದುರವಾಗುತ್ತವೆ. ನೆಮ್ಮದಿಯ ಜೀವನಕ್ಕೆ ಏಸು ಸ್ಮರಣೆ ಅತ್ಯವಶ್ಯಕ. ವಿಶ್ವಶಾಂತಿಯ ಸೌಹಾರ್ದತೆ ಸಹಬಾಳ್ವೆಯ ತತ್ವಸಾರಿದ ಏಸುರವರು ವಿಶ್ವದ ಮನುಕುಲದ ಎಳಿಗೆಗೆ ಶ್ರಮಿಸಿದ ಮಹಾನ್ ದೇವದೂತ ಎಂದು ಏಸು ಕ್ರಿಸ್ತರ ಜೀವನ ಹಾಗೂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನಸಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ಸುಶೀಲಮ್ಮ, ಉಪಾಧ್ಯಕ್ಷ ಖುಷೀದಾ ಬೇಗಂ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಫಾದರ್ ರೇವನೆಂಟ್, ಡಾ:ಸುಂದರ್ ಸಿಂಗ್, ರೇವನೆಂಟ್ ಜಾನ್, ಮರಳು, ರವಿಕುಮಾರ, ಸುಲೋಮಾನ್ ರಾಜ್, ವೆಂಕೋಬದಾಸರ್, ಭರಮಪ್ಪ ಬೇಲ್ಲದ್, ಜನಾರ್ಧನ್, ಶಂಕ್ರಪ್ಪ ದೊಡ್ಡಮನಿ, ಸಾದೀಕ್ ಅಲಿ, ಶೇಖರ, ಸುಭಾನ್, ತಿಪ್ಪಯ್ಯ, ಬಿಸ್ಮಿಲ್ಲಾ ಖಾನ್ ಉಪಸ್ಥಿತರಿದ್ದರು.

Please follow and like us:
error