ಕ್ರೀಯಾ ಸಮಿತಿಗೆ ೧೦ ಸಾವಿರ ರೂಪಾಯಿ ನೀಡಿದ ಸಿ ವಿ ಚಂದ್ರಶೇಖರ

ಕೊಪ್ಪಳ: ತಾಲೂಕಿನ ಕಾಸನಕಂಡಿ ಭಾಗದ ತುಂಗಭದ್ರಾ ಜಲಾಶಯದ ಹೂಳೆತ್ತುವ ಸ್ಥಳಕ್ಕೆ ಬೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಹೂಳೆತ್ತುವ ರೈತರ ಕ್ರೀಯಾ ಸಮಿತಿಗೆ ೧೦ ಸಾವಿರ ರೂಪಾಯಿ ಸಹಾಯದನವನ್ನು ನೀಡಿ ರೈತರೊಂದಿಗೆ ಸದಾ ನಾವು ನಮ್ಮ ಪಕ್ಷ ಜೊತೆಗಿರುತ್ತೇವೆ. ದೇಶದ ಬೆನ್ನುಲುಬಾದ ರೈತರಿಗೆ ಕಣ್ಣಿರನ್ನು ತರಿಸಿದ ರಾಜ್ಯ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಸಾರ್ವಜನಿಕರು , ಯುವಕರು, ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹುಲಿಗಿ ತಾ.ಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಬಿ,ಜೆಪಿ ಎಸ್.ಟಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ವಸಂತ ನಾಯಕ್, ಶ್ರೀಧರ ಡ್ಯಾಂ,
ಮಾರುತಿ ಬನಾಳ, ವಕೀಲರಾದ ಬಿ.ಕೆ ಹಿರೇಮಠ, ಸೋಮಶೇಖರ, ಕೊಪ್ಪಳ ಎಪಿಎಮ್‌ಸಿ ಸದಸ್ಯ ವಿಶ್ವನಾಥ ರಡ್ಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರಾ, ಮೌನೇಶ ಕಿನ್ನಾಳ ಮತ್ತು ಇನ್ನಿತರ ಬಿಜೆಪಿ ಮುಕಂಡರು ಹಾಗೂ ರೈತರು ಉಪಸ್ಥಿತರಿದ್ದರು.

Leave a Reply