ಕ್ರೀಡೆ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ : ಆಸೀಫ್ ಅಲಿ

ಕೊಪ್ಪಳ, ಕ್ರೀಡೆಯು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ, ಕ್ರೀಡೆಯಲ್ಲಿ ಪಾಲ್ಗೊಳ್ಳವುದು ಮುಖ್ಯವಾಗಿರುತ್ತದೆ ಹೊರತು ಸೋಲು ಗೆಲವು ಮುಖ್ಯವಲ್ಲ ಹೀಗಾಗಿ ಪ್ರತಿಯೊಬ್ಬರು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ವಕೀಲರ ಪರಿಷತಿನ ಸದಸ್ಯರಾದ ಎಸ್. ಆಸೀಫ್ ಅಲಿ ಅವರು ಅಭಿಪ್ರಾಯಪಟ್ಟರು.

ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಕಾನೂನು ಮಹಾವಿದ್ಯಾಲಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವ ನಗರ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಚನ್ನೈ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ ಅಂತರ ಕಾಲೇಜ್ ಪುರುಷರ ಕಬ್ಬಡ್ಡಿ ಪಂದ್ಯವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಬ್ಬಡ್ಡಿ ಕ್ರೀಡೆಯು ಮೂಲತಃ ಗ್ರಾಮೀಣ ಕ್ರೀಡೆಯಾಗಿದ್ದು, ಇದನ್ನು ನಮ್ಮ ಕೊಪ್ಪಳದಲ್ಲಿ ಆಯೋಜನೆ ಮಾಡಿರುವುದು ತುಂಬ ಸಂತಸದ ವಿಷಯವಾಗಿದೆ. ನಾನು ಕೂಡ ಯುವಕರಾಗಿದ್ದ ಸಂದರ್ಭದಲ್ಲಿ ಈ ಕ್ರೀಡೆಯನ್ನು ಆಡುತ್ತಿದ್ದೆ ಎಂದ ಅವರು ಇಂದಿನ ಯುವ ಜನಾಂಗ ಕ್ರೀಡೆಯಿಂದ ವಿಮುಖವಾಗುತ್ತಿರುವುದು ಅತ್ಯಂತ ವಿಷಾದನೀಯ ವಿಷಯವಾಗಿದೆ ಎಂದರು.

ಕ್ರೀಡೆಯು ಮನುಷ್ಯನ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತವವನ್ನಾಗಿ ಮಾಡಲು ಸಹಕಾರಿ ಯಾಗುತ್ತದೆ. ಹೀಗಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನುಡಿದರು.

ಇದೇ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವಕೀಲರಾದ ಆರ್.ಬಿ.ಪಾನಘಂಟಿ ಅವರು ಮಾತನಾಡಿ ಕ್ರೀಡೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳಲೆಬೇಕು ಎಂದು ಯುವಕರಿಗೆ ಸಲಹೆ ನೀಡಿದರು. ಕ್ರೀಡೆಯಿಲ್ಲದ ಜೀವನ ಕೀಡೆ ಹತ್ತಿದ ಹಾಗೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ.ಬಿ.ಬ್ಯಾಳಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಿ.ಬಿ.ಕನವಳ್ಳಿಯವರು ಮಾತನಾಡಿದರು. ವೇದಿಕೆ ಮೇಲೆ ಕಾನೂನು ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕರಾದ ಖಾಲಿದ್ ಖಾನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ನಗರ ಸಭೆ ಸದಸ್ಯರಾದ ಸಿದ್ದು ಮ್ಯಾಗೇರಿ, ವಿರುಪಾಕ್ಷಪ್ಪ ಮೋರನಾಳ, ಹಿಂದಿ ಬಿಎಡ್ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಆರ್.ನದಾಫ್, ಎ ಹೆಚ್. ಬಳ್ಳಾರಿ ಉಪಸ್ಥಿತರಿದ್ದರು.

ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಸವರಾಜ್ ಹನಸಿ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಲಕ್ಷ್ಮಿ ಹಾಗೂ ನಾಗವೇಣಿ ಪ್ರಾರ್ಥಿಸಿದರು. ಉಪನ್ಯಾಸಕಿ ಸ್ಮೀತಾ ಅಂಗಡಿ ಅವರು ಕಾರ್ಯಕ್ರಮವನ್ನು ನಿರುಪಿಸಿದರು

Please follow and like us:
error