ಕ್ರೀಡೆ ಗೆಲ್ಲುವದಲ್ಲ ಆದರಲ್ಲಿ ಪಾಲ್ಗೊಳ್ಳುವದು- ಹಾಲೇಶ ಕಂದಾರಿ

ಕ್ರೀಡಾಪಟುತ್ವ ಚಟುವಟಿಕೆಯನ್ನು ಅದರ ಸಲುವಾಗಿಯೇ ಅನುಭವಿಸುವ ಆಕಾಂಕ್ಷೆಯನ್ನು ಮತ್ತು ‌ವಿಶಿಷ್ಟ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಶ್ರೇಷ್ಟ ಕ್ರೀಡಾ ತಜ್ಞರ ಪ್ರಕಾರ ‘ನೀವು ಆಟವನ್ನು ಗೆಲ್ಲುತ್ತೀರಿ ಅಥವಾ ಸೋಲುತ್ತೀರಾ ಎನ್ನುವದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದೀರಿ ಎಂಬುದು ಮುಖ್ಯ ಎಂದಿದ್ದಾರೆ’ ಅದರಂತೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಗೆಲ್ಲುವ ಛಲದೊಂದಿಗೆ ಪಂದ್ಯಾವಳಿಗಳಲ್ಲಿ ಪಾಲ್ಗೋಳ್ಳುವದನ್ನು ಮೊದಲು ಮಾಡಬೇಕೆಂದು ಸಮರ್ಪಣಾ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಹಾಲೇಶ ಕಂದಾರಿ ಮಾತನಾಡಿದರು. ಅವರು ದಿ:25 ಮತ್ತು 26 ಜನವರಿಯಲ್ಲಿ ನಾಡಿನ ವಿಚಾರವಂತ ರಾಜಕಾರಣಿಗಳಲ್ಲಿ ಒಬ್ಬರಾದ , ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರವರ ಜನ್ಮ ದಿನಾಚರಣೆಯ ಪ್ರಯುಕ್ತ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ,ಗುಳದಳ್ಳಿ ಹಾಗೂ ಸಮರ್ಪಣಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ,ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕೋಪಯೋಗಿ ಹಾಗೂ ಸಮಾಜಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳರವರು ಕ್ರೀಡಾ ಪ್ರೋತ್ಸಾಹಕರಾಗಿದ್ದು, ಬಹಳಷ್ಟು ಜನ ಯುವ ಕ್ರೀಡಾಪಟುಗಳು ಉತ್ತಮ ಸಾಧನೆಗೈಯ್ಯಲು ಸ್ಪೂರ್ತಿ ತುಂಬಿದ್ದಾರೆ.ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಡಿಸಲಾಗಿದೆ. ಕ್ರೀಡಾಪಟುಗಳು ಒಂದೆಡೆ ಸೇರಿ‌ ಆಡುವದರಿಂದ ಯುವಕರಲ್ಲಿ‌ ಜಾತಿಭೇದ ದೂರವಾಗಲು ಮತ್ತು ನಾವೆಲ್ಲ ಒಂದು  ಭಾವನೆಯನ್ನು ಮೂಡಿಸಲು‌  ಸಹಾಯಕವಾಗುತ್ತದೆಂದು ಮಾತನಾಡಿದರು.ಕಬಡ್ಡಿಯಿಂದ ಮನಸ್ಸಿಗೆ ಮನರಂಜನೆಯ ಜೊತೆಗೆ  ಪರಸ್ಪರರನ್ನು ಅರಿತು , ಕಲೆತು, ಹೊಂದಾಣಿಕೆ ಮಾಡಿಕೊಳ್ಳುವ, ಸಹಕಾರದ ಪ್ರೀತಿ -ವಿಶ್ವಾಸದ  ಭಾವವನ್ನು , ಭಾವೈಕ್ಯತೆಯನ್ನು, ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವಲ್ಲಿ ಅವುಗಳ ಪಾತ್ರ ಹಿರಿದಾದುದು ಎಂದು  ಹೇಳಿದರು.

ಗುಳದಳ್ಳಿ ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾದ ಡಿಜಿಎಮ್ ಆದ ಪಿ.ಸುಬ್ಬಾರಾವ್ ಮಾತನಾಡಿ, ಭಾರತದಲ್ಲಿ ಕ್ರೀಡಾ ಸಂಪ್ರದಾಯ ವೇದಕಾಲದಿಂದ ಬಂದಿದೆ.  ಕಬ್ಬಡ್ಡಿ ಭಾರತೀಯರ ಕ್ರೀಡೆಯಾಗಿದ್ದು, ಭಾರತೀಯ ಕಬಡ್ಡಿ ತಂಡಕ್ಕೆ  ಅಂತರರಾಷ್ಟ್ರೀಯ ಮಟ್ಟದಲ್ಲಿ‌ ಮಹೋನ್ನತ ಸಾಧನೆಯನ್ನು ಮೊದಲಿನಿಂದಲೂ ತೋರಿಸುತ್ತಾ ಬಂದಿದೆ. ಈಗ ಪ್ರೋ ಕಬ್ಬಡ್ಡಿ ಲೀಗ್ ಪಂದ್ಯಾವಳಿಗಳು ಪ್ರಾರಂಭವಾದಾಗಿನಿಂದಲೂ  ಕಬಡ್ಡಿಗೆ ಹೆಚ್ಚಿನ ಪ್ರಾಧಿನಿತ್ಯ ದೊರೆಯುತ್ತೀರುವದು ಬಹಳ ಸಂತೋಷಕರ ವಿಷಯವಾಗಿದೆ. ಇಂದಿನ‌ ಮಕ್ಕಳು, ವಿದ್ಯಾರ್ಥಿಗಳು , ಯುವಕರು ಮೊಬೈಲ್ ,ಕಂಪ್ಯೂಟರ್, ಅಂತರ್ಜಾಲದಲ್ಲಿ ಆಟವಾಡುತ್ತಾರೆ. ಆದರೆ ದೇಹಕ್ಕೆ ದಂಡಿಸುವ, ವ್ಯಾಯಾಮ ಆಗುವ ಯಾವುದೇ ಕ್ರೀಡೆಯನ್ನು ಆಡುವದಿಲ್ಲ.ಆದರಿಂದ ಇಂದಿನ ಮಕ್ಕಳಲ್ಲಿ ದೈಹಿಕ ಸಧೃಢತೆ ಕಡಿಮೆಯಾಗಿದೆ.ಆದ್ದರಿಂದ ಶಾಲೆ,ಕಾಲೇಜುಗಳಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿ, ಕ್ರೀಡೆ, ಆಟಗಳಲ್ಲಿ ಭಾಗವಹಿಸಲು ತಿಳಿಸಬೇಕು. ಉಪಮುಖ್ಯಮಂತ್ರಿಗಳಾದ ಕಾರಜೋಳರವರ ಜನ್ಮದಿನಾಚರಣೆಯನ್ನು ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಿ ವಿಶಿಷ್ಟವಾಗಿ ಆಚರಿಸುತ್ತೀರುವದು ಬಹಳ‌ ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಪಂದ್ಯಾವಳಿಯಲ್ಲಿ‌ ಒಟ್ಟು  32 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು  ಶಿವಮೂರ್ತೇಶ್ವರ ಆರಾಹಳ ತಂಡ, ದ್ವೀತಿಯ ಬಹುಮಾನ ಜೈಭೀಮ‌ ಭಾಯ್ಸ್ ಕಬ್ಬಡ್ಡಿ ತಂಡ ಕೊಪ್ಪಳ, ತೃತಿಯ ಬಹುಮಾನವನ್ನು ಪುಟ್ಟರಾಜೇಶ್ವರ ಸ್ಪೋಟ್ಸ್ ಕ್ಲಬ್ ಉಡಮಕಲ್  ತಂಡಗಳು ಪಡೆದುಕೊಂಡವು. ಉತ್ತಮ  ಕ್ಯಾಚರ್, ಉತ್ತಮ ರೈಡರ್ ಉತ್ತಮ ಆಲರೌಂಡರ್ ಬಹುಮಾನಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಅಂದಿಗಾಲಪ್ಪ ಹೊಳೆಯಾಚಿ,ತಾ.ಪಂ.ಸದಸ್ಯರಾದ ಮಹಾಂತಮ್ಮ ಯಡ್ಡೋಣಿ,ಮುಖಂಡರಾದ ಪಾಂಡು ಹಲಗೇರಿ, ಮುಖ್ಯೋಪಾಧ್ಯಯರಾದ ಬಿ.ಜಿ.ಹೂಗಾರ, ಹಿರಿಯರಾದ ಪಂಪಣ್ಣ ಮೇಟಿ, ಗುಡದಪ್ಪ‌ದೊಡ್ಮನಿ,ಅಮರಪ್ಪ‌ ಯಡ್ಡೋಣಿ, ಯಮನೂರಪ್ಪ‌ ಕುಕನೂರ, ಸಂಜೀವಪ್ಪ‌ ಮೇಟಿ, ಹನುಮಂತಪ್ಪ ಹುಲಗಿ,ಶಂಕ್ರಪ್ಪ ಕೊಪ್ಪಳ,ಪ್ರಭಾಕರ ಬಡೀಗೇರ್, ನಿಂಗಪ್ಪ ಗೊರವರ್, ಗಾಳೆಪ್ಪ ಗೊರವರ್, ಶಂಬುಲಿಂಗಪ್ಪ ಅಂಗಡಿ, ನಿರ್ಣಾಯಕರುಗಳಾದ ಮಂಜುನಾಥ ಆರೆಂಟನೂರ್, ಈಶಪ್ಪ ದೊಡ್ಮನಿ, ಗವಿಸಿದ್ದಪ್ಪ‌ ಆನೆಗುಂದಿ, ರಮೇಶ ಹಾಗೂ ಯಮನೂರಪ್ಪ ಗೊರವರ್, ಲಕ್ಷ್ಮಣ ಮುಂತಾದವರು ಉಪಸ್ಥಿತರಿದ್ದರು.

Please follow and like us:
error