ಕ್ರಿಕೇಟ್ ಬೆಟ್ಟಿಂಗ್ ದಾಳಿ ಬಂಧನ

ಕೊಪ್ಪಳ :   ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಪನ್ನಾಪುರ ಕ್ರಾಸ ಹತ್ತಿರ ಶಶಿ ಕಂಪ್ಯೂಟರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಐ.ಪಿ.ಎಲ್. ಪಂದ್ಯಾವಳಿಗಳ ಮೇಲೆ ಕ್ರಿಕೇಟ್ ಬೆಟ್ಟಿಂಗ್ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿಯು ಶ್ರೀ ಶರತಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರಿಗೆ ಬಂದ ಮೇರೆಗೆ ಕೂಡಲೇ ಅವರು ಸಿಬ್ಬಂದಿ ರವರಿಗೆ ಕರೆದುಕೊಂಡು ಹೋಗಿ ದಾಳಿ ಮಾಡಿ ಕ್ರಿಕೇಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿ ಯಮನೂರ ತಂದೆ ಕೇಮರಾಜ ಮೇಲೆ ದಾಳಿ ಮಾಡಲು ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು ಸದರಿಯವನಿಂದ 10,500/- ರೂ ಮತ್ತು 1 ಮೋವೈಲ್ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.
ದಿನಾಂಕ 27-04-2019 ರಂದು ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ರಿಲಯನ್ಸ್ ಪೆಟ್ರೋಲ್ ಬಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐ.ಪಿ.ಎಲ್. ಪಂದ್ಯಾವಳಿಗಳ ಮೇಲೆ ಕ್ರಿಕೇಟ್ ಬೆಟ್ಟಿಂಗ್ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿಯು  ಉದಯ ರವಿ ಪಿ.ಐ. ಗಂಗಾವತಿ ನಗರ ಠಾಣೆ ರವರಿಗೆ ಬಂದ ಮೇರೆಗೆ ಕೂಡಲೇ ಅವರು ಸಿಬ್ಬಂದಿ ರವರಿಗೆ ಕರೆದುಕೊಂಡು ಹೋಗಿ ದಾಳಿ ಮಾಡಿ ಕ್ರಿಕೇಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ 04 ಜನ ಆರೋಪಿತರ ಮೇಲೆ ದಾಳಿ ಮಾಡಲು ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು ಸದರಿಯವನಿಂದ 2,500/- ರೂ ಮತ್ತು 1 ಮೋವೈಲ್ ಜಪ್ತಿ ಪಡಿಸಿಕೊಂಡು 04 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.
ಇಸ್ಪೇಟ್ ಜೂಜಾಟ ದಾಳಿ

image

ದಿನಾಂಕ 27-04-2019 ರಂದು ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಕಲತಾವರಗೇರಿ ಗ್ರಾಮದ ದನಕನದೊಡ್ಡಿ ವಾನ್ಯಾರ ಬಂಡಿ ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 08 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ರಂಗಯ್ಯ ಪಿ.ಎಸ್.ಐ. ಮುನಿರಾಬಾದ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 4,900/- ರೂ ವಶಪಡಿಸಿಕೊಂಡು 08 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ದಾಳಿ
ದಿನಾಂಕ 27-04-2019 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ ಹನುಮಂತಪ್ಪ ತಂದೆ ಪ್ಯಾಟಪ್ಪ ತೋಟದ ಸಾ: ಹಿರೇಮನ್ನಾಪುರ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ  ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 1,784/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

Please follow and like us:
error