ಕ್ಯೂ.ಆರ್ ಕೋಡನ್ನು ಸ್ಕ್ಯಾನ್ ಮಾಡಿ ಜಾತ್ರೆ ಕಾರ್ಯಕ್ರಮ ಲೈವ್ ನೋಡಿ


ಕೊಪ್ಪಳ: ಶ್ರೀಗವಿಮಠವು ಜಾತ್ರಾಮಹೋತ್ಸವದಲ್ಲಿ ಪ್ರತಿವರ್ಷ ತಂತ್ರಜ್ಞಾನವನ್ನು ಬಳಸಿಕೊಂಡು ಲಕ್ಷಾಂತರ ಭಕ್ತರಿಗೆ ಮಾಹಿತಿ ಹಾಗೂ ಆನ್ ಲೈನ್ ಮೂಲಕ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಕಳೆದ ಒಂದು ದಶಕದಿಂದ ಒದಗಿಸುತ್ತಿದೆ. ಮುಂದುವರೆದು ಈ ವರ್ಷದ ಜಾತ್ರೆಯಲ್ಲಿ ಇಂದಿನ ಟ್ರೆಂಡಿಂಗ್ ಟೆಕ್ನಾಲಜಿಯಾದ ಕ್ಯೂ.ಆರ್ ಕೋಡನ್ನು ಮೊಬೈನಲ್ಲಿ ಸ್ಕ್ಯಾನ್ ಮಾಡುವದರ ಮೂಲಕ ಜಾತ್ರೆಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು ದಿನಾಂಕ ೧೨-೦೧-೨೦೨೦ರ ಸಾಯಂಕಾಲದಿಂದ ವೀಕ್ಷಣೆ ಮಾಡಬಹುದಾಗಿದೆ. ಅಷ್ಟೆ ಅಲ್ಲದೇ ಜಾತ್ರೆಯ ಆಮಂತ್ರಣ ಪತ್ರಿಕೆ, ಪಾರ್ಕಿಂಗ್ ನಕ್ಷೆಗಳನ್ನು ತಮ್ಮ ಮೊಬೈಲ್ ನಲ್ಲಿ ಪಡೆಯಬಹುದಾಗಿದೆ. ಗವಿಮಠದ ಆಧೀಕೃತ ಫೇಸ್ಬುಕ್ ಪುಟ ಲೈಕ್ ಮಾಡಲು ಹಾಗೂ ಕರ್ತೃಗದ್ದುಗೆಗೆ ರುದ್ರಾಭಿಷೇಕ ಮಾಡಿಸಲು ಆನಲೈನ್ ಪಾವತಿ ಮಾಡಬಹುದಾಗಿದೆ. ಹೀಗೆ ಜಾತ್ರಾ ಮಹೋತ್ಸವದ ಮಾಹಿತಿಯನ್ನು ಭಕ್ತರು ತಮ್ಮ ಮೊಬೈಲ್ ಮೂಲಕ ಸಕಾಲಕ್ಕೆ ತಿಳಿದುಕೊಳ್ಳಬಹುದು. ಇದರಿಂದ ವೆಬ್ ಪುಟಗಳ ಹುಡುಕಾಟದ ತೊಂದರೆ ಹೋಗಿ ನೇರವಾಗಿ ವಿಷಯವನ್ನು ಭಕ್ತರಿಗೆ ತಲುಪುತ್ತದೆ. ಭಕ್ತರು ಸುಲಭವಾಗಿ ಇದನ್ನು ಬಳಸಿಕೊಳ್ಳಬಹುದು.

Please follow and like us:
error