ಕ್ಯಾಮೆರಾ ಪ್ರಾತ್ಯಕ್ಷಿಕೆ

ಕೊಪ್ಪಳ: ನಗರದ ಎಸ್.ಜಿ.ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ದೂರದರ್ಶನ ಕುರಿತ ಅಧ್ಯಯನಕ್ಕೆ ಸಂಬಂಧಿಸಿದಂತೆ ಕ್ಯಾಮೆರಾ ಪ್ರಾತ್ಯಕ್ಷಿಕೆ ನಡೆಯಿತು. ಟಿವಿ  ವಾಹಿನಿಯ ಕೊಪ್ಪಳದ ವಿಡಿಯೋ ಜರ್ನಲಿಸ್ಟ್ ಮಾರುತಿ ಕಟ್ಟಿಮನಿ ವಿಡಿಯೋ ಕ್ಯಾಮೆರಾದ ಭಾಗಗಳು, ಬಳಕೆ, ಪ್ರಯೋಜನ ಕುರಿತು ಮಾರ್ಗದರ್ಶನ ನೀಡಿದರು. ಉಪನ್ಯಾಸಕ ಬಸವರಾಜ ಕರುಗಲ್ ದೂದರರ್ಶನ ಕಾರ್ಯಕ್ರಮಗಳ ತಾಂತ್ರಿಕ ಸಲಕರಣೆಗಳ ಕುರಿತು ವಿವರಿಸಿದರು. ಬಿಎ ಮತ್ತು ಬಿಕಾಂನ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದರು. ಈ ವೇಳೆ ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಹರ ದಾದ್ಮಿ, ಪ್ರೊ.ಮನೋಹರ ದಾದ್ಮಿ, ಪ್ರೊ.ಬಸವರಾಜ ಪೂಜಾರ ಹಾಗೂ ಪ್ರೊ. ದಯಾನಂದ ಸಾಳುಂಕೆ ಇತರರು ಇದ್ದರು.

Please follow and like us:
error