ಕೋವಿಡ್19ಗೆ ಕೊಪ್ಪಳ ನಗರದ ವ್ಯಕ್ತಿ ಬಲಿ : ಸಾವಿನ ಸಂಖ್ಯೆ ೧೩ಕ್ಕೆ ಏರಿಕೆ

; ಕೊಪ್ಪಳ ಜಿಲ್ಲೆಯ ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಕನ್ನಡನೆಟ್ ನ್ಯೂಸ್,‌ ಕೊಪ್ಪಳ:
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ ಮತ್ತೊಬ್ಬ ವ್ಯಕ್ತಿ ‌ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಕೊಪ್ಪಳ ನಗರದ 1ನೇ ವಾರ್ಡ್ ನ ಸಿರಸಪ್ಪಯ್ಯನಮಠ ಏರಿಯಾದ 40 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೋವಿಡ್19 ಮಾರ್ಗಸೂಚಿಯಂತೆ ಮೃತದೇಹದ‌ ಅಂತ್ಯಕ್ರಿಯೆ ನಡೆಸಲಾಗುವುದು ಈ ವ್ಯಕ್ತಿ ಇದೇ ೨೦ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ‌ ಡಾ.ದಾನರೆಡ್ಡಿ ತಿಳಿಸಿದ್ದಾರೆ.

Please follow and like us:
error