ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ ಸಂಘಪರಿವಾರದವರು-ಸಿಎಂ ಸಿದ್ದರಾಮಯ್ಯ

ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ 


ಸಂಘಪರಿವಾರದವರು. ಅವರೇ ಇದೆಲ್ಲವನ್ನು ಮಾಡಿ ಬೇರೆಯವರ ಮೇಲೆ ಹಾಕುತ್ತಾರೆ…ಬಿಜೆಪಿ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು . ಕೊಪ್ಪಳದ ಬಸಾಪೂರ ಏರಸ್ಕ್ರಿಪ್ಟ್ ನಲ್ಲಿ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಮಾಡಬೇಕು.ನಾನು ಡೆಲ್ಲಿಗೆ ಹೋಗಬೇಕು ಹೋದ ಬಳಿಕ ನಿರ್ಣಯ ಮಾಡಲಾಗುತ್ತೆ ಎಂದರು. ಪತ್ರಿಕಾಗೋಷ್ಠಿಯಲ್ಲಿ
ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಪ್ರತಾಪಸಿಂಹ ಅವರಿಗೆ ರಾಜಕೀಯವಾಗಿ ಮ್ಯಾಚುರಿಟಿ ಬಂದಿಲ್ಲ. ಹೀಗಾಗಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಮತಿಯವಾದಿಗಳೇ ಮಂಗಳೂರು ಗಲಭೆಗೆ ಕಾರಣ. ಮಂಗಳೂರಿಗೆ ಯಾರನ್ನೂ ಇನ್ ಚಾರ್ಜ ಮಾಡಿಲ್ಲ.. ಕೆಂಪಯ್ಯ ಅಲ್ಲಿ ಹೋಗುತ್ತಿಲ್ಲ..
ಯಾವುದೇ ಸಂಘಟನೆಗಳಿರಲಿ ಮತಿಯವಾದ ಮಾಡಿದರೆ ಅದು ತಪ್ಪು. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಎಂದು ಹೇಳಿದರು. ಲಿಂಗಸಗೂರ ಹೋಗುವ ಸಂದರ್ಭದಲ್ಲಿ ಕೊಪ್ಪಳಕ್ಕೆ ಆಗಮಿಸಿದ್ದ ಸಿಎಂ ಜೊತೆ ಕೆಪಿಸಿಸಿ ಅದ್ಯಕ್ಷ ಜಿ.ಪರಮೇಶ್ವರ, ದಿನೇಶ ಗುಂಡೂರಾವ್, ಎಂ.ಬಿ.ಪಾಟೀಲ್ , ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಯಿದ್ದರು.

Related posts