ಚೈತ್ರಾ ಕುಂದಾಪುರ ಕೋಮುದ್ವೇಷದ ಭಾಷಣ : ಗಂಗಾವತಿ ಉದ್ವಿಗ್ನ

ಕೋಮುದ್ವೇಷದ ಭಾಷಣ ಮಾಡಿ ಹಳ್ಳಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಸಂಘ ಪರಿವಾರದ ಕಾರ್ಯಕರ್ತೆ. ದ್ವೇಷದ ವಾತಾವರಣಕ್ಕೆ ಬಲಿಯಾದ ಗ್ರಾಮದ ಸಾಮರಸ್ಯ.ಕಾಂಗ್ರೆಸ್ ಅಭ್ಯರ್ಥಿ ಯ ಕಾರಿನ ಗಾಜು ಹೊಡೆದು ಹಾಕಿದ ದುಷ್ಕರ್ಮಿಗಳು. ಗಂಗಾವತಿ ತಾಲೂಕಿನ ಹಿರೇಸೂಳಿಕೇರಿ ತಾಂಡಾ ನಿನ್ನೆ ಸಂಜೆ ಉದ್ರೇಕಕಾರಿ ಘಟನೆಗಳಿಗೆ ಸಾಕ್ಷಿಯಾಯಿತು.
ಕೆಲವು ದಿನಗಳ ಹಿಂದಷ್ಟೇ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿಯ ಬಗ್ಗೆ ದ್ವೇಷದ ಭಾಷಣ ಮಾಡಿ ವಿಷ ಕಕ್ಕಿಕೊಂಡಿದ್ದ ,ಕೋಮುದ್ವೇಷದ ಮಾತುಗಳನ್ನು ಹೇಳಿದ್ದ ಚೈತ್ರಾ ಕುಂದಾಪುರ ಈಗ ಮತ್ತೊಮ್ಮೆ ಅಂತಹುದೇ ಕೋಮು ದ್ವೇಷದ ಮಾತುಗಳನ್ನಾಡಿ ಗಂಗಾವತಿಯ ಹಳ್ಳಿಗಳಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಸಿದ್ದಾರೆ. ನಿನ್ನೆ ಸಂಜೆ ಗಂಗಾವತಿ ವಿಧಾನಸಭಾ ವ್ಯಾಪ್ತಿಯ ಸೂಳಿಕೇರಿ ತಾಂಡಾದ ದೇವಸ್ಥಾನದಲ್ಲಿ ಭಾಷಣ ಮಾಡಿದ ಚೈತ್ರಾ ಕುಂದಾಪುರ ಹಿಂದೂ ಧರ‍್ಮದ ಬಗ್ಗೆ ಮಾತನಾಡುವುದಾಗಿ ಹೇಳಿ ಭಾಷಣ ಆರಂಭಿಸಿ ಇಕ್ಬಾಲ್ ಅನ್ಸಾರಿಯ ವಿರುದ್ದ ಮುಸಲ್ಮಾನ ಜನಾಂಗದ ವಿರುದ್ದ ವಿಷ ಕಾರಿಕೊಂಡಿದ್ದಾರೆ. ತನ್ನ ಮನಸ್ಸಿಗೆ ಬಂದಂತೆ ಮಾತನಾಡುತ್ತಾ ಹೋದ ಚೈತ್ರಾ ಕುಂದಾಪುರ ಕಾಂಗ್ರೆಸ್ ಗೆ ಮತ ನೀಡದಂತೆ ತಾಕೀತು ಮಾಡಿದ್ದಾಳೆ. ಇಕ್ಬಾಲ್ ಅನ್ಸಾರಿ ಹೆಣ್ಣು ಮಕ್ಕಳನ್ನುಇಟ್ಟುಕೊಂಡು ಬಿಜಿನೆಸ್ ಮಾಡ್ತಾನೆ… ಮಸೀದಿಗಳಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡಲು ರೇಟ್ ಬೋರ‍್ಡ್ ಹಾಕಿರ‍್ತಾರೆ. ಬ್ರಾಹ್ಮಣ ಹೆಣ್ಣುಮಗಳಿಗೆ ೫ ಲಕ್ಷ, ಕ್ಷತ್ರೀಯ ಹೆಣ್ಣುಮಗಳಿಗೆ-೪ ಲಕ್ಷ, ಕುರುಬ ಹೆಣ್ಣುಮಗಳಿಗೆ ೩.೫ ಲಕ್ಷ, ವಾಲ್ಮಿಕಿ ಹೆಣ್ಣು ಮಗಳಿಗೆ ೩ ಲಕ್ಷ, ಲಂಬಾಣಿ ಹೆಣ್ಣು ಮಕ್ಕಳಿಗೆ ೨ ಲಕ್ಷ ಎಂದು ಫಿಕ್ಸ್ ಮಾಡಿದ್ದಾರೆ ಎಂದು ಭಾಷಣ ಮಾಡಿದ ಚೈತ್ರಾ ಕುಂದಾಪುರ ೩೨ ಸಾವಿರ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಅವರನ್ನು ಮದುವೆ ಮಾಡಿಕೊಂಡು ಮತಾಂತರ ಮಾಡುತ್ತಿದ್ಧಾರೆ. ಅದರಲ್ಲಿ ಎರಡೂವರೆಯಿಂದ ಮೂರು ಸಾವಿರ ಹೆಣ್ಣು ಮಕ್ಕಳು ಗಂಗಾವತಿಯಲ್ಲಿದ್ದಾರೆ. ಅವರನ್ನು ಬಿಡಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇಕ್ಬಾಲ್ ಅನ್ಸಾರಿ ಪೋಲಿಸರನ್ನು, ಅಧಿಕಾರಿಗಳನ್ನುಕೊಂಡು ಕೊಂಡಿದ್ದಾರೆ. ಗಂಗಾವತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂರು ಮದುವೆಯಾದರೆ ಡೀಲ್ ಮಾಡ್ತಾನೆ. ಇಕ್ಬಾಲ್ ಅನ್ಸಾರಿ ತನ್ನ ಮನೆಯಲ್ಲಿಟ್ಟುಕೊಂಡು ೨೫ ಲಕ್ಷ ಕೊಡು ಮಗಳನ್ನು ಬಿಟ್ಟುಕೊಡ್ತಿನಿ ಎಂದು ಡೀಲ್ ಮಾಡ್ತಾನೆ. ನಮ್ಮ ಮಕ್ಕಳನ್ನು ಇಟ್ಟುಕೊಂಡು ಬಿಜಿನೆಸ್ ಮಾಡ್ತಾನೆ. ಹಿಂದೂ ವಿರೊಧಿಗೆ, ಹಿಂದೂಗಳನ್ನು ಸಾಯಿಸಿದವನಿಗೆ ಮತ ಹಾಕಬೇಡಿ, ಅಜ್ಜ ಮುತ್ತಜ್ಜಂದಿರು ಘೋರಿ ಮಹ್ಮದ್, ನಿಜಾಮ್, ಟಿಪ್ಪು ಸುಲ್ತಾನ್ ನಿಗೆ ಜಾಗ ಕೊಟ್ಟ ಕಾರಣಕ್ಕೆ ಅನುಭವಿಸುತ್ತಿದ್ಧೆವೆ. ದೇವಸ್ಥಾನಗಳನ್ನು ಮಸೀದಿ ಮಾಡುತ್ತಿದ್ದಾರೆ ಎನ್ನುವ ಮೂಲಕ ಸಾಮಾಜಿಕ ಸೌಹಾರ್ದ ಕದಡುವ ಯತ್ನ ಮಾಡಿದ್ದಾಳೆ. ಇದರದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ‍್ಯಕರ್ತರು ಸ್ಥಳಿಯರು ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪರಿಸ್ಥಿತಿ ಕೈ ಮಿರಿದ್ದನ್ನು ಅರಿತ ಚೈತ್ರಾ ಕುಂದಾಪೂರ ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಕಾರ್ಯಕರ್ತರು ಅವಳ ವಾಹನದ ಮುಂದೆ ಮಲಗಿ ಪ್ರತಿಭಟಿಸಿದ್ದಾರೆ.ಶಂಕರ‍್ ನಾಯಕ್ ಎನ್ನುವ ವ್ಯಕ್ತಿ ಮಲಗಿ ಪ್ರತಿಭಟನೆ ನಡೆಸಿದಾಗ ಅವರ ಪತ್ನಿ ಶಂಕರ‍್ ನಾಯಕ್ ನನ್ನು ಮೇಲೆಬ್ಬಿಸಲು ಪ್ರಯತ್ನಿಸಿದಾಗ ತಳ್ಳಾಟವಾಗಿದೆ ಶಂಕರ‍್ ನಾಯಕ್ ಪತ್ನಿಯ ತಾಳಿಯ ಸರ ಕಿತ್ತು ಹೋಗಿದೆ. ಹೀಗಾಗಿ ಮತ್ತಷ್ಟು ಗಲಾಟೆ ಶುರುವಾಗಿದೆ. ಹಾಗೋ ಹೀಗೋ ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ ಚೈತ್ರಾ ಕುಂದಾಪುರ . ನಂತರ ಸೂಳಿಕೇರಿ ಗ್ರಾಮದಲ್ಲಿ ಪರ ವಿರೊಧ ಗಲಾಟೆಗಳಾಗಿವೆ. ಗಲಾಟೆಯ ಬಗ್ಗೆ ತಿಳಿದು ಪರಿಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿಯ ಕಾರಿನ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಲು ಯತ್ನಿಸಿದೆ. ಕೋಮು ಪ್ರಚೋದನೆಗೊಳಗಾಗಿದ್ದ ವ್ಯಕ್ತಿಯೋರ್ವ ಕಾರಿನ ಗಾಜನ್ನು ಹೊಡೆದು ಹಾಕಿದ್ದಾನೆ. ನಂತರ ಗ್ರಾಮೀಣ ಠಾಣೆಯ ಫೊಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ಹಲವಾರು ದಿನಗಳಿಂದ ಜಿಲ್ಲೆಯ ವಿವಿದೆಡೆ ಅದರಲ್ಲೂ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಂಚರಿಸಿ ಕೋಮುದ್ವೇಷದ ಭಾಷಣ ಮಾಡುತ್ತಿರುವ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಚೈತ್ರಾ ಕುಂದಾಪುರ ವಿರುದ್ದ ಕಾಂಗ್ರೆಸ್ ಕಾರ‍್ಯಕರ‍್ತರು, ಸಾರ‍್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇವಳ ವಿರುದ್ದ ಕ್ರಮ ಕೈಗೊಳ್ಳದ ಎಸ್ಪಿ ಅನೂಪ್ ಶೆಟ್ಟಿಯ ಕಾರ್ಯವೈಖರಿಯನ್ನೂ ಖಂಡಿಸಿ ಶೀಘ್ರವೇ ಇಂತಹ ಸಮಾಜಘಾತುಕ ವ್ಯಕ್ತಿಯನ್ನು ಜಿಲ್ಲೆಯಿಂದ ಹೊರ ಹಾಕುವಂತೆ ಆಗ್ರಹಿಸಿದ್ದಾರೆ. ಓರ್ವ ಕಾಂಗ್ರೆಸ್ ಅಭ್ಯರ‍್ಥಿ ಅದರಲ್ಲೂ ಮಾಜಿ ಶಾಸಕನ ಮೇಲೆ ಈ ರೀತಿಯ ಗೂಂಡಾ ವರ್ತನೆ ತೋರಿರುವುದು ಆಕ್ರೋಶಕ್ಕೆ ಕಾರಣವಾಗಿದೆ

ಸಂಘಪರಿವಾರದ ಚೈತ್ರಾ ಕುಂದಾಪುರ ವಿರುದ್ದ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದುರ್ಗಾದೇವಿಯ ದೇವಸ್ಥಾನ ದ ಹತ್ತಿರ ಯಾವುದೇ ಪರವಾನಿಗೆ ಇಲ್ಲದೆ.
ಎರಡು ಕೋಮುಗಳ ಭಾವನೆ ಕೇರಳಿಸುವಂತೆ. ಭಾಷಣ ಮಾಡಿದ ಚೈತ್ರ ಕುಂದಾಪುರ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ವೆಂಕಟೇಶ ಪೂಜಾರ ಮತ್ತು ಶೇಖರ ನಾಯಕ ವಿರುದ್ದು ಪ್ರಕರಣ ದಾಖಲಾಗಿದೆ.ಗಂಗಾವತಿ ವಿಧಾನ ಸಭಾ ಕ್ಷೇತ್ರದ ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿ ದೂರಿನ ಅನ್ವಯ ಚೈತ್ರಾ ಕುಂದಾಪುರ ಇತರ ಇಬ್ಬರ ಮೇಲೆ ಕಲಂ 171h ,ipc125,Rp 127 ಪ್ರಕರಣ ದಾಖಲಾಗಿದೆ.ಅಲ್ಲದೇ ಶಂಕರ ನಾಯಕ್ ದೂರಿನನ್ವಯ ೧೨ ಜನರ ಮೇಲೆ ಪ್ರಕರಣ ದಾಖಲಾಗಿದೆ.

ಒಟ್ಟಿನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಂತಿ ಕದಡುವ ಯತ್ನ ನಡೆದಿದ್ದು ಪೋಲಿಸರು ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ

Please follow and like us:
error