ಕೋತಿಗಳ ಕಾಟಕ್ಕೆ ಬೇಸತ್ತ ಜನರಿಂದ ಪ್ರತಿಭಟನೆ

ಕೊಪ್ಪಳ : ಕೊಪ್ಪಳದಲ್ಲಿ ಹಲವು ಏರಿಯಾಗಳಲ್ಲಿ ಮಂಗನ ಕಾಟಕ್ಕೆ ಬೇಸತ್ತ ಜನ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು. ಕಳೆದ ಮೂರು ದಿನಗಳಿಂದ ಜನರಿಗೆ ಕಚ್ಚುತ್ತಿರುವ ಕೋತಿಗಳ ಕಾಟದಿಂದ ಜನ ಭೀತರಾಗಿದ್ದಾರೆ. ಕೋತಿಯನ್ನ ಹೊಡೆಯಲು ಕೋಲು ಹಿಡಿದು ತಿರುಗಾಡುತ್ತಿದ್ದಾರೆ

ನಗರಸಭೆಯವರುಗೆ ತಿಳಿಸಿದರೂ ಇನ್ನೂ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಜನ ಕೋತಿ ಸೆರೆ ಹಿಡಿಯುವಂತೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ನಗರದ ತೇರಾಪಂಥಿ ಬಳಿ ಬೆಳಿಗ್ಗೆ ೩೦ ಜನರ ಮೇಲೆ ಹಲ್ಲೆ ಮಾಡಿದೆ.ಹಮಾಲರ ಕಾಲೋನಿ, ಗಡೆದಾರ್ ಚಾಳ್ , ಮಹಾವೀರ ಕಾಲೋನಿಯಲ್ಲಿ ಕೋತಿ ಕಾಟ ವಿಪರೀತವಾಗಿದೆ. ಈವರೆಗೆ ಮಕ್ಕಳು , ವ್ಯಾಪರಸ್ಥರು, ರಸ್ತೆ ಮೇಲೆ ಓಡಾಡುತ್ತಿರುವವರ ಮೇಲೆ ಕೋತಿಗಳು ದಾಳಿ ಮಾಡಿದ್ದಲ್ಲದೆ ಹಲವು ಜನರನ್ನು ಕಚ್ಚಿರುವುದರಿಂದ ಗಂಭೀರಗಾಯಗಳಾಗಿವೆ.ಸ್ಥಳಕ್ಕೆ ನಗರಭೆ ಹಾಗು ಅರಣ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಸ್ಥಳೀಯರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ರ ಭೇಟಿ ಪರಿಶೀಲನೆ ನಡೆಸಿದರು. ಆದರೆ ಕೋತಿಗಳು ಸಿಗಲೇ ಇಲ್ಲ.

Please follow and like us:
error