ಕೊವೀಡ್-19 ಸ್ಕ್ರಿನಿಂಗ್ ಪರೀಕ್ಷೆ ಪ್ರಾಯೋಗಾಲಯ ಉದ್ಘಾಟನೆ


ಕೊಪ್ಪಳ, : ಜಿಲ್ಲೆಯ ವೈದ್ಯಾಕೀಯ ವಿಜ್ಞಾನ ಸಂಸ್ಥೆಯ ಮಿಣಿ ಜೀವಶಾಸ್ತç ವಿಭಾಗದಲ್ಲಿ ಕೋವೀಡ್-19 ಸ್ಕಿçÃನಿಂಗ್ ಪರೀಕ್ಷೆ ಪ್ರಾಯೋಗಾಲಯವನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಇಂದು (ಮೇ.26) ಉದ್ಘಾಟಿಸಿದರು.  
ಮಿಣಿ ಜೀವಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ ಪಿ.ಸಾಲ್ಮನಿ ಅವರು ಮಾತನಾಡಿ ಕೊವೀಡ್-19 ಸ್ಕಿçÃನಿಂಗ್ (ಟ್ರೋನ್ಯಾಟ್) ಪರೀಕ್ಷೆ ಕೇವಲ ಕೊವೀಡ್-19 ನೆಗೆಟಿವ್ ಫಲಿತಾಂಶವನ್ನು ಮಾತ್ರ ದೃಢಿಕರಿಸುತ್ತದೆ.  ಕೊವೀಡ್-19 ಪಾಸಿಟಿವ್ ಫಲಿತಾಂಶವನ್ನು ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮೂಲಕ ದೃಢಿಕರಣ ಗೊಳಿಸಬೇಕಾಗಿರುತ್ತದೆ.  ಪ್ರತಿದಿನ 40 ರಿಂದ 45 ಪರೀಕ್ಷೆಗಳನ್ನು ಮಾಡಬಹುದು.  ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಿಣಿ ಜೀವಶಾಸ್ತç ವಿಭಾಗದಲ್ಲಿ ವೈರಾಣು ಸಂಶೋಧನೆ ಹಾಗೂ ರೋಗನಿರ್ಣಯ ಪ್ರಯೋಲಯವು (ವಿಆರ್‌ಡಿಎಲ್) ಮುಕ್ತಾಯದ ಹಂತದಲ್ಲಿದ್ದು, ಈ ಮಾಸಂತ್ಯಕ್ಕೆ ಕಾರ್ಯಾರಂಭವಾಗಲಿದೆ.  ವೈರಾಣು ಸಂಶೋಧನೆ ಹಾಗೂ ರೋಗ ನಿರ್ಣಯ ಪ್ರಾಯೋಗಲಯದಲ್ಲಿ ಆರ್.ಟಿ.ಪಿ.ಸಿ.ಆರ್. ವಿಧಾನ ಮೂಲಕ ಕೊವೀಡ್-19 ಪರೀಕ್ಷೆಯನ್ನು ಮಾಡಲಾಗುತ್ತದೆ. ಆರ್.ಟಿ.ಪಿ.ಸಿ.ಆರ್. ವಿಧಾನದ ಮೂಲಕ ಕೋವೀಡ್-19 ಪಾಸಿಟಿವ್ ಮತ್ತು ನೆಗೆಟಿವ್ ಪ್ರಕರಣಗಳನ್ನು ದೃಢಿಕರಸಿಕೊಳ್ಳಬೇಕಾಗಿರುತ್ತದೆ. ಹಾಗೂ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮೂಲಕ ದೃಢಿಕರಣ ಗೊಳಿಸಬೇಕಾಗಿರುತ್ತದೆ.  ಪ್ರತಿದಿನ 140-150 ಪರೀಕ್ಷೆಗಳನ್ನು ಮಾಡಬಹುದು ಎಂದರು.  
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಂತೇಶ ಪಾಟೀಲ್ ಮೈನಳ್ಳಿ, ಜಿ.ಪಂ. ಸಿಇಒ ರಘುನಂದನ್ ಮೂರ್ತಿ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಬಿ. ದಾನರೆಡ್ಡಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ವೀರಣ್ಣ ಕಮತರ ಸೇರಿದಂತೆ ಮಿನಿ ಜೀವಶಾಸ್ತç ವಿಭಾಗದ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.

Please follow and like us:
error