ಕೊರೋನಾ ಸೋಂಕಿತ ಬ್ಯಾಂಕ್ ನೌಕರನ ಟ್ರಾವೆಲ್ ಹಿಸ್ಟರಿ

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ : ಪಿ.ಸುನೀಲ್ ಕುಮಾರ್
ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಅಗ್ರಿಕಲ್ಚರ್ ಫಿಲ್ಡ್ ಆಫಿಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಾಹಿತಿ ನೀಡಿದರು.
       ಕೋವಿಡ್-19ರ ಸೋಂಕು ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರದAದು (ಮೇ.26) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.  
       ಕೋವಿಡ್-19ರ ಸೋಂಕಿತ ವ್ಯಕ್ತಿ ಪಿ-2254 ವಯಸ್ಸು 27 ವರ್ಷದ ಪುರುಷನಾಗಿದ್ದು, ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೆಸರೂರ ಗ್ರಾಮದ ನಿವಾಸಿಯಾಗಿದ್ದಾರೆ.  ಇವರು ಮಸ್ಕಿ ಕೆನರಾ ಬ್ಯಾಂಕ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.  ಮೇ. 17 ಮತ್ತು 18 ರಂದು ಮಸ್ಕಿಯಲ್ಲಿಯೇ ಇದ್ದು, ಮೇ. 20 ರಂದು ಕೆಸರೂರಿಗೆ ಬಂದಿರುತ್ತಾರೆ.  ಸಮೀಪದ ದೊಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡಿರುತ್ತಾರೆ.  ಈ ವ್ಯಕ್ತಿಗೆ ಕೋವಿಡ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳ ಮಾಹಿತಿಯನ್ನು 24 ಗಂಟೆಗಳ ಒಳಗಡೆ ಪಡೆದು ಅವರಿಗೂ ಕ್ವಾರೆಂಟೈನ್ ಮಾಡಲಾಗುತ್ತದೆ. ಸೋಂಕಿತ ವ್ಯಕ್ತಿಯಿಂದ ನೋಡಲ್ ಅಧಿಕಾರಿಗಳು ಸ್ವ ವಿವರವಾದ  ಮಾಹಿತಿಯನ್ನು ಪಡೆದಿದ್ದಾರೆ. ಕೆಸರೂರು ಮತ್ತು ದೊಟಿಹಾಳ ಈ ಎರಡು ಗ್ರಾಮಗಳು ಅಕ್ಕ-ಪಕ್ಕದಲ್ಲಿರುವುದರಿಂದ ಸೋಂಕಿತ ವ್ಯಕ್ತಿಯ ಮನೆಯ ಅಕ್ಕ-ಪಕ್ಕ ಮತ್ತು ಅವರು ಭೇಟಿ ನೀಡಿದ ಪ್ರದೇಶವನ್ನು ಕೋವಿಡ್-19 ಹೊಸ ನಿಯಮಗಳನ್ವಯ ಬಫರ್ ಜೋನ್ ಮಾಡಲಾಗುವುದು ಎಂದರು.
       ಸೋಂಕಿತ ವ್ಯಕ್ತಿಯ ಸಹೋದರ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಹಿನ್ನೆಯಲ್ಲಿ ಇವರು ತೆರಳಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಇದಕ್ಕೆ ಸಂಬಂಧಿಸಿದಂತೆ ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ಮಾಹಿತಿ ಪಡೆದು ಅವರಿಗೂ ಕ್ವಾರೆಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
       ಆಶಾ ಕಾರ್ಯಕರ್ತೆಯರು ಹಾಗೂ ಬಿ.ಎಲ್.ಒ ಗಳು ಜಿಲ್ಲೆಯಲ್ಲಿ ಈಗಾಗಲೇ ಎರಡು ಸಲ ಸರ್ವೇ ಕಾರ್ಯವನ್ನು ಮಾಡಿದ್ದು, ಕೋವಿಡ್ ಕಾಯಿಲೆಯ ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ತಕ್ಷಣ ಮಾಡಿಸಲಾಗುತ್ತಿದೆ.  ಆದರೂ ಜನರು ಕೆಲವೊಂದು ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಧರಿಸದೇ ಬೇಜವಾಬ್ದಾರಿಯಿಂದ ತಿರುಗಾಡುತ್ತಿರುವುದು ಕಂಡುಬರುತ್ತಿದೆ.  ಆರೋಗ್ಯ ರಕ್ಷಣೆಗೆ ಮೊದಲು ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲೆಯ ಸಾರ್ವಜನಿಕರಿಗೆ ಮನವಿ ಮಾಡಿದರು.
       ಜಿಲ್ಲೆಯಲ್ಲಿ ಇಂದು ಟ್ರೂನಾಟ್ ಮಷಿನ್ ಟೆಸ್ಟಿಂಗ್ ಲ್ಯಾಬಿಗೆ ಚಾಲನೆ ನೀಡಿದ್ದು, ಇದು ಕೋವಿಡ್-19 ನಿಖರ ಮಾಹಿತಿ ನೀಡದಿದ್ದರೂ ಸಹ ಪ್ರಥಮಿಕ ಲಕ್ಷಣಗಳ ವರದಿಯ ಜೊತೆಗೆ ನೆಗೆಟಿವ್ ವರದಿಯನ್ನು ಇದರಿಂದ ಪಡೆಯಬಹುದಾಗಿದೆ. ಈ ತಿಂಗಳೊಳಗಾಗಿ ಕೊವಿಡ್-19 ಆರ್ಟಿಫಿಶಿಯಲ್ ಲ್ಯಾಬ್ ಪರೀಕ್ಷೆಯನ್ನು ಮಾಡುವ ವ್ಯವಸ್ಥೆಯನ್ನು ಜಿಲ್ಲೆಯಲ್ಲಿಯೇ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

Please follow and like us:
error