ಕೊಪ್ಪಳ : ಕೊರೊನಾ ಮಾಹಾಮಾರಿಗೆ ಕೊಪ್ಪಳದಲ್ಲಿ ಮೊದಲ ಬಲಿಯಾಗಿದೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಮಹಿಳಾ ಸೋಂಕಿತೆ ಪಿ 7105 ಕರೋನಾಕ್ಕೆ ಬಲಿಯಾದ ನತದೃಷ್ಟ ಮಹಿಳೆ. ಎರಡು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು ಬಳ್ಳಾರಿಯ ಜಿಂದಾಲ್ ಲಿಂಕ್ ಹೊಂದಿರುವ ಮೃತ ಸೋಂಕಿತೆ ಜಿಂದಾಲ್ ನಲ್ಲಿ ಕೆಲ್ಸ ಮಾಡುವ ಮೃತಳ ಮಗನಿಂದ ಸೋಂಕು ಹರಡಿತ್ತು. ಗ್ರೀನ್ ಝೋನ್ ಕಾಪಾಡಿಕೊಂಡು ಬಂದಿದ್ದ ಜಿಲ್ಲೆಗೆ ಕೊರೊನಾ ಶಾಕ್ ನೀಡಿದೆ. 22 ಸೋಂಕಿತರಲ್ಲಿ 11 ಜನ ಬಿಡುಗಡೆ,1 ಡೆತ್ ಮರಳಿ ಗ್ರಾಮದಲ್ಲಿ ಮನೆ ಮಾಡಿದ ಆತಂಕ. ಭಯದಿಂದ ಹೆದರಿತ್ತಿರೋ ಜನ್ರು ಜಿಲ್ಲೆಯಲ್ಲಿ ಹೆಚ್ಚಾದ ಆತಂಕ…
Resident of marali, Gangavati tq
P 7105 50 yrs Female Known case of Type 2 Diabetes mellitus Date of admission- 13-06-20@9.48pm Date of death- 17-06-20 @7.50pm Diagnosis- Moderate disease-covid Cause of death- Acute myocardial infarction. ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಜಿಂದಾಲ್ ಲಿಂಕ್ ಅಕ್ಕಪಕ್ಕದ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ವಿವಿದೆಡೆ ವಾಸಮಾಡುತ್ತಿರು ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಮೂಡಿದೆ.