ಕೊರೊನಾ ದಿನಗಳಲ್ಲಿ ಖೊಟ್ಟಿ ಬಿಲ್ ೪ ಕೋಟಿ ಅವ್ಯವಹಾರ- ಶಿವರಾಜ್ ತಂಗಡಗಿ

ಕೊರೊನಾ ದಿನಗಳಲ್ಲಿ ಕಾಮಗಾರಿ ಖೊಟ್ಟಿ ಬಿಲ್ ಎತ್ತಿ 4 ಕೋಟಿ ರೂಪಾಯಿ ಅವ್ಯವಹಾರ
ಕೊಪ್ಪಳ: ಕೊರೊನಾ ದಿನಗಳಲ್ಲಿ ಖೊಟ್ಟಿ ಬಿಲ್ ಎತ್ತಿ ಸುಮಾರು 4 ಕೋಟಿ ರೂಪಾಯಿನ್ನು ಕನಕಗಿರಿ ಶಾಸಕ ಹಾಗೂ ಗುತ್ತಿಗೆದಾರರು ಇತರರು ಸೇರಿ ಗೋಲ್‌ಮಾಲ್ ಮಾಡಿದ್ದಾರೆ ಅದರ ಅವ್ಯವಹಾರವನ್ನು ಸಿಒಡಿ ತನಿಖೆಗೆ ಒಪ್ಪಿಸಿ ತನಿಖೆ ಮಾಡಿಸಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.
ಕೊಪ್ಪಳ ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಜಿಪಂ ಸಿಇಒ, ಡಿಸಿಯವರಿಗೆ ತನಿಖೆಗೆ ಆಗ್ರಹಿಸಿ ಮನವಿ ಕೊಡಲಾಗುವುದು , ಕ್ಷೇತ್ರದಲ್ಲಿ ಮಾಡಿರುವ ಕಾಮಗಾರಿ ಗಳು ಒಂದು ಪೂರ್ಣವಾಗಿಲ್ಲ. ಪೂರ್ಣವಾಗದೇ ಎಲ್ಲಾ ಖೊಟ್ಟಿ ಬಿಲ್ ಗಳನ್ನು ಎತ್ತಿ ಅವ್ಯವಹಾರ ಮಾಡಿದ್ದಾರೆ ನಾನು ಮಂತ್ರಿಯಾಗಿ ದ್ದಾಗ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಸಿ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದೆ ಶಾಸಕ ದಡೆಸುಗೂರು ಮಾಡುವುದಕ್ಕಾಗುತ್ತಾ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕನಕಗಿರಿ ಶಾಸಕರಿಗೆ ಸವಾಲ್ ಎಸೆದರು.
ಈ ಕಾಮಗಾರಿಗಳ ಕುರಿತು ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಈಗ ನಾನು ಹೇಳುತ್ತಿರುವ ಕಾಮಗಾರಿ ಅವ್ಯವಹಾರ ಇದು ಜಸ್ಟ್ ಸ್ಯಾಂಪಲ್ ಅಷ್ಟೇ; ಕೊರೊನಾ ಇದೆ ಅಂತ ಸುಮ್ಮನೆ ಇದ್ದಿವಿ. ಆದರೆ ಈಗ ಈ ಅವ್ಯವಹಾರ ಕುರಿತು ಕೊಪ್ಪಳ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಸಂರ್ಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಇದರಲ್ಲಿ ಜೆಇ ರವಿ ಮುಖ್ಯ ಕೈವಾಡವಿದೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಪ್ರಚಾರಕ್ಕಾಗಿ ಶಿವರಾಜ ತಂಗಡಗಿ ಪ್ರಚಾರಕ್ಕಾಗಿ ಮಾತನಾಡುತ್ತಾರೆ ಎಂಬ ಶಾಸಕ ಬಸವರಾಜ ದಡೆಸೂಗೂರು ಅವರ ಹೇಳಿಕೆಗೆ ಪ್ರತಿಕ್ರೀಯೆಯಿಸಿದ ತಂಗಡಗಿ ಅವರು, ಶಾಸಕರಾಗಿ ಕ್ಷೇತ್ರವನ್ನು ಆಳುವ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ಮೊದಲು ಅವರ ಪಕ್ಷದ ರಾಜ್ಯಾಧ್ಯಕ್ಷರ ಹೇಸರೇ ಹೇಳಲು ಬರುತ್ತಿಲ್ಲವಾಗಿದೆ. ಆದ್ದರಿಂದ ರಾಜ್ಯಾಧ್ಯಕ್ಷರ ಹೆಸರನ್ನೇ ಹೇಳಲು ಬಯಸದ ಶಾಸಕರಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ನಾನು ಈಗಾಗಲೇ ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಈಗಾಗಿ ನನಗೆ ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲ, ಆದರೆ ವಿರೋಧ ಪಕ್ಷದಲ್ಲಿ ಕುಳಿತ ನಾವು ಆಡಳಿತದ ಲೋಪಗಳನ್ನ ಎತ್ತಿ ತೋರಿಸುವ ಕೆಲಸ ಮಾಡಿದ್ದೇವೆ ವಿನಃ ಪ್ರಚಾರಕ್ಕಾಗಿ ಅಲ್ಲ ಎಂದು ಹೇಳಿದರು.
ಕನಕಗಿರಿ ಮತ್ತು ಗಂಗಾವತಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೆ ಕೊಟ್ಟಿ ಬಿಲ್ ಆಡಳಿತ ವಿದ್ಯೆ ನಡೆದಿದೆ. ಇದರ ಕುರಿತು ಯಾರಾದರೂ ಆರ್‌ಟಿಐಯಲ್ಲಿ ಮಾಹಿತಿ ಹಾಕಿದ್ರೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡ್ತಿದಾರೆ. ಜಾತಿ ನಿಂದನೆಯ ಸುಳ್ಳು ಕೇಸ್ ಹಾಕುವ ಮೂಲಕ ಜನರನ್ನು ಎದುರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಸರಕಾರದವರು ನಾವು ಸ್ವಚ್ಛ ಆಡಳಿತದವರು ಎಂಬುದು ಸಾಬಿತು ಪಡಿಸಲಿ. ತಾಕತ್ತಿದ್ದರೆ ಕನಕಗಿರಿ ಕ್ಷೇತ್ರದಲ್ಲಿ ನಡೆದ ಅವ್ಯವಹಾರ ಕಾಮಗಾರಿಗಳ ತನಿಖೆಯನ್ನು ಸಿಓಡಿ ತನಿಖೆಗೆ ಒಪ್ಪಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ರಾಜಶೇಖರ ಹಿಟ್ನಳ , ಕಾಟನ ಪಾಷಾ, ಕೃಷ್ಣ ಇಟ್ಟಂಗಿ, ಶ್ರೀನಿವಾಸ ರೆಡ್ಡಿ,ವಕ್ತಾರ ರವಿ ಕುರಗೋಡ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error