ಕೊಪ್ಪಳ 2ನೇ ಬಂದ್ ಗೆ ನೀರಸ ಪ್ರತಿಕ್ರಿಯೆ

ಕೊಪ್ಪಳ : ಮೋಟಾರು ವಾಹನ‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ೨ನೇ ದಿನದ ಬಂದ್ ಗೆ ಕೊಪ್ಪಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ‌ಬೆಳಗಿನಿಂದಲೇ ಲಾಂಗ್ ರೂಟ್ ಬಸ್ ಗಳನ್ನಹ ಆರಂಬಿಸಲಾಗಿತ್ತು. ಬಂದ್ ಗೆ ಕೊಪ್ಪಳದ ಗಂಗಾವತಿ, ಕುಷ್ಟಗಿ ತಾಲೂಕಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ , ಖಾಸಗಿ ವಾಹನಗಳು ಸಹಜ ಸ್ಥಿತಿಯಲ್ಲಿ ಓಡಾಟವಿತ್ತು. ಕೊಪ್ಪಳ, ಯಲಬುರ್ಗಾ, ಕನಕಗಿರಿ, ಕಾರಟಗಿ, ಕುಕನೂರಿನಲ್ಲಿ ಬಂದ್ ಗೆ ವ್ಯಾಪರಸ್ಥರು ಬೆಂಬಲಿಸಲಿಲ್ಲ. ಕೊಪ್ಪಳ ದಲ್ಲಿ ಸಿಐಟಿಯು, ಎಐಟಿಯುಸಿ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನಾ ರ್ಯಾಲಿ ನಡೆಯಿತು. ಸಾರ್ವಜನಿಕ ಮೈದಾನದಿಂದ ತಹಶೀಲ್ದಾರ ಕಚೇರಿವರೆಗೆ ಸಾಗಿಬಂದ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ರಪಡಿಸಿದರು.ತಹಶೀಲ್ದಾರ್ ಮುಖಾಂತರ ರಾಜ್ಯಾಲರಿಗೆ ಮನವಿ ಸಲ್ಲಿಸಿದರು. ಗಂಗಾವತಿಯಲ್ಲಿ ನಿನ್ನೆ ತಡ ರಾತ್ರಿ ಕೊಪ್ಪಳ ಹೈದ್ರಾಬಾದ್ ಬಸ್ ಗೆ ಕಲ್ಲು ತೂರಾಟ ನಡೆಸಿ ಗಾಜನ್ನು ಪುಡಿ ಮಾಡಿದ್ದರು. ಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿರೋಧ ತೋರಿದ್ದರಿಂದ ಕುಷ್ಟಗಿ ಹಾಗೂ ಗಂಗಾವತಿ ಯಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಬಂದಾಗಿತ್ತು. ಶಾಲಾ, ಕಾಲೇಜುಗಳು ಆರಂಭವಾಗಿದ್ದರೂ ಬಸ್ ನ ಅನಾನೂಕೂಲತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಒಟ್ಟಾರೆಯಾಗಿ ಕುಷ್ಟಗಿ, ಗಂಗಾವತಿ ಹೊರತು ಪಡಿಸಿ ಜಿಲ್ಲೆಯಾದ್ಯಂತ ಬಂದ್ ವಿಫಲವಾಗಿದೆ ಎನ್ನಬಹದು.