ಕೊಪ್ಪಳ ​ವಾರ್ಡ-ನಂ 17 ರಸ್ತೆಯನ್ನು ಸರಿಪಡಿಸಲು ಸಾರ್ವಜನಿಕರ ಒತ್ತಾಯ 

ಕೊಪ್ಪಳ ನಗರದ ಗಾಂಧಿ ಸ್ಮಾರಕ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ವಾರ್ಡ ನಂ 17 ಸರಿ ಸುಮಾರು  ತಿಂಗಳಿಂದ ಈ ರಸ್ತೆಯು ಪ್ರಾರಂಭವಾಗಿದೆ ಅಂದರೆ ಬಲಭಾಗದಿಂದ ಚರಂಡಿ ಪ್ರಾರಂಭಿಸಿದಾಗ ಅದನ್ನು ಅರ್ಧಕ್ಕೆ ನಿಲ್ಲಿಸಿ ರಸ್ತೆಯ ಮಧ್ಯಭಾಗದಿಂದ 12 ಪೂಟ ಅಗಲೀಕರಣ ಮಾಡಿದ ಮೇಲೆ ಮಾಡಲು ಸಾರ್ವಜನಿಕರು ಒತ್ತಾಯಿಸಿದ್ದರಿಂದ ಈ ಕಾಮಗಾರಿಯ ಕೆಲಸ ಹಾಗೇಯೇ ನಿಲ್ಲಿಸಿರುತ್ತಾರೆ ಈ ವಿಷಯವಾಗಿ ಶಾಸಕರನ್ನು ಸಾರ್ವಜನಿಕರು ಬೇಟಿ ಮಾಡಿದಾಗ ನಗರ ಸಭೆಯ ಆಯುಕ್ತರು ಹಾಗೂ ಸಂಬಂಧಿಸಿದ  ಇಂಜೀನಿಯರನ್ನು ಕರೆಯಿಸಿ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದರು ಸಹ ನಗರ ಸಭೆಯಿಂದ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ ಇಲ್ಲಿ ಸಾರ್ವಜನಿಕರು ಮತ್ತು ಶಾಲಗೆ ಹೊಗುವ ಮಕ್ಕಳಿಗೆ ತೊಂದರೆಯಾಗಿದೆ ಆದ್ದರಿಂದ ಆದಷ್ಟು ಬೇಗನೆ ಕೆಲಸವನ್ನು ಪ್ರಾರಂಭಿಸಿ ರಸ್ತೆಯನ್ನು ಮಧ್ಯಭಾಗದಿಂದ 12 ಪೂಟ ವಿಸ್ತರಣೆ ಮಾಡಲು ಶಾಲಾ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply