ಕೊಪ್ಪಳ ಹುಲಿಗೆಮ್ಮ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಕಾರ್ಯಕ್ರಮ

ಕೊಪ್ಪಳ- ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 10 ರಂದು ಭಾರತ ಹುಣ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಭಾರತ ಹುಣ್ಣಿಮೆಯ ಅಂಗವಾಗಿ ಅಂದು ಬೆಳಿಗ್ಗೆ 09 ಗಂಟೆಗೆ ದೇವಸ್ಥಾನದಲ್ಲಿ ಗಂಗಾದೇವಿಯವರಿಗೆ ಪೂಜೆ, ರಾತ್ರಿ 9-30 ಗಮಟೆಗೆ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ 9-45 ಗಂಟೆಗೆ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ 10 ಗಂಟೆಗೆ ಪೂಜಾರರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು ನಂತರ ಭಕ್ತಾದಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆ ಜರುಗಲಿದೆ. ಭಕ್ತಾದಿಗಳು ಭಾರತ ಹುಣ್ಣಿಮೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply