ಕೊಪ್ಪಳ : ಸ್ವಾಮಿಜಿ ರಾಸಲೀಲೆ ವಿಡಿಯೋ ಇಲ್ಲಿದೆ ನೋಡಿ

ಸ್ವಾಮೀಜಿಗಳು ಎಂದ್ರೆ ಸಮಾಜವನ್ನು ಸರಿ ದಾರಿಗೆ ತಂದು ಸಮಾಜಸೇವೆ ಮಾಡುವ ಪೂಜ್ಯರು ಅಂತ ನಾವು ನಂಬಿರುತ್ತೇವೆ.. ಆದ್ರೆ ಇಲ್ಲೊಬ್ಬ ಸ್ವಾಮಿಜಿ ಲಾಡ್ಜನಲ್ಲಿ ಮಹಿಳೆಯ ಜೊತೆಗೆ ಕುಳಿತುಕೊಂಡಿರುವ ದೃಶ್ಯ ಇದೀಗ ಭಾರಿ ಸದ್ದು ಮಾಡುತ್ತಿದೆ.. ಇನ್ನು ಮಹಿಳೆಯ ಜೊತೆ ಸ್ವಾಮಿಜಿ ರಾಸಲೀಲೆ ನಡೆಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಇದ್ರೀಂದ ಆಕ್ರೋಗೊಂಡ ಭಕ್ತರು ಸ್ವಾಮೀಜಿ ಮಠ ತೊರೆಯಬೇಕು ಎಂದು ಮಠಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸುತ್ತಿದ್ದಾರೆ. ಲಾಡ್ಜವೊಂದರಲ್ಲಿ ಮಹಿಳೆಯ ಜೊತೆ ಕುಳಿತಿರುವ ಸ್ವಾಮೀಜಿ..

click here for video

 

ಸ್ವಾಮೀಜಿ ರಾಸಲೀಲೆ ನಡೆಸಿದ್ದಾನೆ ಆರೋಪಿಸಿ ಮಠಕ್ಕೆ ಮುತ್ತಿಗೆ ಹಾಕಿರೋ ಕೆಲ ಭಕ್ತರು.. ನನಗೆ ಸ್ವಾಮೀಜಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಕರಣ ದಾಖಲಿಸಿರೋ ಸ್ವಾಮಿಜಿಯ ಮಾಜಿ ಡ್ರೈವರ್.. ಸ್ವಾಮಿಜಿದು ತಪ್ಪಿಲ್ಲ ವಿಡಿಯೋದಲ್ಲಿ ರಾಸಲಿಲೆ ಇಲ್ಲ ಏನು ಇಲ್ಲ ಎನ್ನುತ್ತಿರೋ ಕೆಲ ಭಕ್ತರು.. ಇದೇಲ್ಲಾ ಹೈಡ್ರಾಮ ನಡೆದಿರೋದು ಕೊಪ್ಪಳದ ಗಂಗಾವತಿಯ ಕಲ್ಮಠದಲ್ಲಿ.. ಕೊಪ್ಪಳದಲ್ಲಿ ಪ್ರಖ್ಯಾತ ಮಠವಾಗಿರುವ ಕಲ್ಮಠದ ಕೊಟ್ಟುರು ಚನ್ನಬಸವ ಸ್ವಾಮಿಜಿ ಈ ಎಲ್ಲಾ ಆರೋಪಗಳಿಗೆ ಗುರಿಯಾದವರು.. ಕಲ್ಮಠದ 96ನೇ ಪೀಠಾಧಿಪತಿಗಳಾದ ಕೊಟ್ಟುರು ಸ್ವಾಮಿಜಿ ಮಠ ಸೇರಿದಂತೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಜೊತೆ ರಾಸಲಿಲೆ ತೊಡಗಿದ್ದ ಅಲ್ಲದೆ ಮಹಿಳೆಯ ಜೊತೆ ಲಾಡ್ಜವೊಂದಲ್ಲಿ ಕುಳಿತಿರುವ ದೃಶ್ಯ ವೈರಲ್ ಆಗಿತ್ತು.. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತಯೇ ಸ್ವಾಮೀಜಿ ತನ್ನ ಮೋಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಫ್ ಆಗಿದ್ದಾರೆ.. ಇದ್ರೀಂದ ಆಕ್ರೋಶಗೊಂಡ ಭಕ್ತರು ಮಠಕ್ಕೆ ಮುತ್ತಿಗೆ ಹಾಕಿ ಸ್ವಾಮಿಜಿ ಮಠ ತೊರೆಯಬೇಕೆಂದು ಪ್ರತಿಭಟನೆ ಮಾಡಿದ್ರು.ಸ್ವಾಮೀಜಿಯ ಡ್ರೈವರ್ ಆಗಿ ಸುಮಾರು 15 ವರ್ಷದಿಂದ ಕೆಲಸ ಮಾಡ್ತಾ ಇದ್ದ ಮಲ್ಲಯ್ಯಸ್ವಾಮಿ ಈ ಎಲ್ಲಾ ವಿಡಿಯೋಗಳನ್ನು ತನ್ನ ಮೋಬೈಲ್ ನಲ್ಲಿ ಸೆರೆ ಹಿಡಿದಿದ್ದ.. ಇನ್ನು ನಾಲ್ಕು ವರ್ಷದ ಹಿಂದಯೇ ಸ್ವಾಮಿಜಿಯ ವಿಡಿಯೋವನ್ನು ಈ ಡ್ರೈವರ್ ಮಾಡಿ ಇಟ್ಟುಕೊಂಡಿದ್ದ.. ಇದೇ ವೆಳೆ ಮಲ್ಲಯ್ಯಸ್ವಾಮಿ, ಸ್ವಾಮಿಜಿ ಹತ್ತಿರ 10 ಲಕ್ಷ ರೂ ಹಣ ಕೊಡುವಂತೆ ಆಮೀಷವೊಡ್ಡಿದ್ದ ಎನ್ನಲಾಗುತ್ತಿದೆ.. ಇದ್ರಿಂದ ಎಚ್ಚೇತ್ತುಕೊಂಡಿದ್ದ ಸ್ವಾಮಿಜಿ ಡ್ರೈವರ್ ಕೆಲಸದಿಂದ ಮಲ್ಲಯ್ಯಸ್ವಾಮಿಯನ್ನು ಕಿತ್ತುಹಾಕಿದ್ದ.. ಇದ್ರೀಂದ ಮತ್ತಷ್ಟು ಕುಪಿತನಾದ ಮಲ್ಲಯ್ಯಸ್ವಾಮಿ ಆಶ್ಲೀಲವಿಲ್ಲ ಯಾವುದೇ ದಾಖಲೆ ಇಲ್ಲದ ದೃಶ್ಯವನ್ನು ಮಾಧ್ಯಗಳಿಗೆ ಕೊಟ್ಟು ಸುದ್ದಿ ಮಾಡಿಸಿದ್ದಾನೆ ಎನ್ನುವ ಆರೋಪವನ್ನು ಇಲ್ಲಿನ ಕೆಲ ಭಕ್ತರು ಮಾಡ್ತಾ ಇದ್ದಾರೆ.. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತಯೇ ಮಲ್ಲಯ್ಯಸ್ವಾಮಿ ನನಗೆ ಜೀವ ಬೆದರಿಕೆ ಇದೆ ಅಂತ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.. ಸ್ವಾಮಿಜಿಯ ದೃಶ್ಯ ಮಾಧ್ಯಗಳಲ್ಲಿ

ಹೊರಬರುತ್ತಿದ್ದಂತಯೇ ಸ್ವಾಮಿಜಿ ಪೀಠದಿಂದ ಕೆಳಗಿಳಯಬೇಕು ಅಂತ ಭಕ್ತರು ಆಗ್ರಹಿಸುತ್ತಿದ್ದು, ಸ್ವಾಮಿಜಿ ಮಹಿಳೆಯ ಜೊತೆ ರಾಸಲಿಲೆ ನಡೆಸುತ್ತಿರೋ ವಿಡಿಯೋ ಇಲ್ಲದಿರುವುದರಿಂದ ಕೆಲ ಭಕ್ತರು ಪ್ರಕರಣವನ್ನು ತನಿಖೆಗೆ ಒತ್ತಾಯಿಸುತ್ತಾರೆ.. ಒಟ್ನಲ್ಲಿ ಇದು ಡೀಲ್ ಗಾಗಿ ನಡೆದ ಪ್ರಕರಣವೋ ಅಥವಾ ನಿಜವಾಗಿಯೂ ಸ್ವಾಮಿಜಿ ರಾಸಲೀಲೆ ನಡೆಸಿದ್ರಾ.? ಅಂತ ಪೊಲೀಸರ ತನಿಖೆ ನಂತರವೇ ಗೊತ್ತಾಗಲಿದೆ..

Please follow and like us:
error

Related posts