ಕೊಪ್ಪಳ ಸಿಡಿಲಿಗೆ ಇಬ್ಬರು ಬಲಿ

ನಿನ್ನೆಯಿಂದ ಸುರಿಯುತ್ತಿರುವ ಮಳೆ ಭಾರೀ ಅನಾಹುತಗಳನ್ನೆ ಸೃಷ್ಟಿ ಮಾಡಿದೆ. ಭಾಗ್ಯನಗರದಲ್ಲಿ ಹಲವಾರು ಗಿಡಮರಗಳು ಉರುಳಿ ಹೋಗಿವೆ. ಇಂದು ಸಂಜೆ ಕುಷ್ಟಗಿ ತಾಲೂಕಿನಲ್ಲಿ ಇಬ್ಬರು ರೈತರು ಜೀವ ಕಳೆದುಕೊಂಡಿದ್ದಾರೆ. 

ಸಿಡಿಲು ಬಡಿದು ವ್ಯಕ್ತಿ ಸಾವು. ಕುಷ್ಟಗಿ ತಾಲೂಕಿನ ನೆರೆಬಂಚಿಯಲ್ಲಿ ಘಟನೆ ನಡೆದಿದೆ.ಲಕ್ಷ್ಮಣ ಬಿಜಕಲ್ ೨೮ ಸಾವಿಗೀಡಾದ ದುರ್ದೈವಿ.ಹೊಲದಲ್ಲಿ ಗೊಬ್ಬರ ಇಳಿಸುವಾಗ ಸಿಡಿಲಿಗೆ ಬಲಿಯಾಗಿದ್ದಾನೆ.ಮೃತ ವ್ಯಕ್ತಿ ಲಿಂಗನಬಂಡಿಯ ನಿವಾಸಿಯಾಗಿದ್ದಾನೆ.ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲಿಗೆ ರೈತ ಮಹಿಳೆಯೂ ಸಾವನ್ನಪ್ಪಿದ್ದಾಳೆ .. ಕುಷ್ಟಗಿ ತಾಲೂಕಿನ. ಬಾದಿಮನಾಳ ಗ್ರಾಮದಲ್ಲಿ ಘಟನೆ. ನಡೆದಿದೆ. ರೇಣುಕಾ ಪ್ರಭಾಕರ ೩೦ ಸಾವನ್ನಪ್ಪಿದ ಮಹಿಳೆ.. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮೃತಳಿಗೆ ೬ ಮಕ್ಕಳಿವೆ. ಅದರಲ್ಲಿ ಒಂದು ವರ್ಷದ ಮಗು ಸಹ ಇದೆ.  ನುಮಸಾಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply