ಕೊಪ್ಪಳ : ಲಂಚ ಕೊಟ್ರೆ ಹೊಸ ಶಾಲೆಗೆ ಪರ್ಮಿಷನ್

ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ.ಕೊಪ್ಪಳದಲ್ಲಿ ಲಂಚ ಕೊಟ್ರೆ ಸಾಕು ಹೊಸ ಶಾಲೆ ತೆರೆಯಬಹುದು.

ಬಯಲಾಯಿತು ಡಿಡಿಪಿಐ ಹನುಮಂತಪ್ಪನ ಅಸಲಿ ಮುಖ . ಖಾಸಗಿ ಶಾಲೆ ಅನುಮತಿಗಾಗಿ ಸುಲಿಯುತ್ತಾನಂತೆ ಸಾವಿರಾರು ರೂಪಾಯಿ ದುಡ್ಡು

ಡಿಡಿಪಿಐಗೆ ೧೫೦೦೦ ಹಾಗು ಒಳಗಡೆ ಕೇಸ್ ವರ್ಕರ್ಗೆ ೫೦೦೦ ಇನ್ನು ಉಳಿದವರಿಗೆ ೫೦೦೦ ಕೊಟ್ರೆ ಅನುಮತಿ

ಒಟ್ಟು ೨೫೦೦೦ ಕೊಟ್ರೆ ಹೊಸ ಶಾಲೆಗೆ ಅನುಮತಿ‌ ನೀಡ್ತಾನೆ ಡಿಡಿಪಿಐ ಹನುಮಂತಪ್ಪ. ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ . ವಿಡಿಯೋದಲ್ಲಿ ಸೆರೆಯಾಗಿವೆ ವಸೂಲಿ ಕೆಲಸಗಳನ್ನು ಮುಗಿಸಿಕೊಳ್ಳುತ್ತಿರುವ ಡಿಡಿಪಿಐ. ಜಿ.ಪಂ ಸಿಇಓ ಕಡ್ಡಾಯ ರಜೆಗೆ ಆದೇಶ ನೀಡಿದರೂ ಇಲಾಖೆಯಲ್ಲಿ ಆದೇಶಕ್ಕೆ ಕ್ಯಾರೆ ಮಾಡದೇ ಕೆಲಸ ಮಾಡುತ್ತಿರುವ ಡಿಡಿಪಿಐ

ಆಪೀಸಿನಲ್ಲಿ ಕುಳಿತೇ ವ್ಯವಹಾರಗಳನ್ನು ನಡೆಸುತ್ತಿರುವ ಡಿಡಿಪಿಐ. ಡಿಡಿಪಿಯ ಬಂಡವಾಳವನ್ನು ಬಟಾಬಯಲು ಮಾಡಿದ ದುಡ್ಡುಕೊಟ್ಟ ಇಬ್ಬರು ಮಹಿಳೆಯರು.ಖಾಸಗಿ ಶಾಲೆ ಅನುಮತಿಗಾಗಿ ಕೊಡಬೇಕಂತೆ ಸಾವಿರಾರು ಹಣ. ಖಾಸಗಿ ಶಾಲೆಗಳ ಸಂಘದಿಂದ ಏನೂ ಉಪಯೋಗವಿಲ್ಲ ಎಲ್ಲರೂ ಕೊಟ್ಟಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡ ಮಹಿಳೆಯರು. ಆರೋಪಗಳು ಇದ್ದರೂ ಕ್ರಮಕೈಗೊಳ್ಳದೆ, ಕೇವಲ ಕಡ್ಡಾಯ ರಜೆ ಆದೇಶ ಹೊರಡಿಸಿದ ಜಿ.ಪಂ ಸಿಇಓ ವೆಂಕಟರಾಜ. ಕಡ್ಡಾಯ ರಜೆಯ ಆದೇಶ ಹೊರಡಿಸಿದರು, ಮೌಖಿಕವಾಗಿ ಇನ್ನು ಎರಡು ದಿನ ಕೆಲಸ ಮಾಡಲು ಅನುಮತಿ ನೀಡಿದ್ದಾರಂತೆ ಡಿಸಿ ಎಂ ಕನಗವಲ್ಲಿ. ಸಿಬ್ಬಂದಿಯ ಹೇಳಿಕೆ ವಿಡಿಯೋದಲ್ಲಿ ಸೆರೆಯಾಗಿದೆ.

ಮಕ್ಕಳನ್ನ ಉತ್ತಮ ಪ್ರಜೆಯನ್ನಾಗಿ ಮಾಡೋದು ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸೂಕ್ತ ಸೌಲಭ್ಯ ನೀಡದಿದ್ರೆ ಕ್ರಮ ಕೈಗೊಳ್ಳೋದು ಶಿಕ್ಷಣ ಅಧಿಕಾರಿಗಳು, ಆದ್ರೆ ಅಧಿಕಾರಿಯೇ ಇಲ್ಲಿ ಅಡ್ಡ ದಾರಿ ಹಿಡಿದಿದ್ದಾನೆ. ಈತನಿಗೆ ಲಂಚ ಕೊಟ್ರೆ ಸಾಕು ಖಾಸಗಿ ಶಾಲೆಗೆ ಪರ್ಮಿಷನ್ ಕೊಡ್ತಾನೆ. ಯಾರು ಈ ಲಂಚಬಾಕ ಅಧಿಕಾರಿ,

ಕೊಪ್ಪಳದ ಡಿಡಿಪಿಐ ಹನುಮಂತಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈತನ ಜೊತೆ ಸಿಬ್ಬಂದಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಕೂಗು ಕೇಳಿ ಬಂದಿದೆ. ಹೊಸದಾಗಿ ಒಂದನೇ ತರಗತಿಯಿಂದ 5 ನೇ ತರಗತಿ ವರೆಗೆ ಖಾಸಗಿ ಶಾಲೆಗೆ ಪರ್ಮಿಷನ್ ಬೇಕಂದ್ರೆ ಡಿಡಿಪಿಐ ಹನುಮಂತಪ್ಪನಿಗೆ 15,000 ಸಾವಿರ, ಕೇಸ್ ವರ್ಕರ್ ಗೆ 5 ಸಾವಿರ, ಇನ್ನುಳಿದ ಸಿಬ್ಬಂದಿಗಳಿಗೆ 5 ಸಾವಿರ ರೂಪಾಯಿ ಲಂಚ ಕೊಡಬೇಕು. ಇಷ್ಟು ಮಾಡಿದ್ರೆ ಸಾಕು ನಿಮ್ಮ ಕೆಲಸ ಸಲಿಸಾಗಿ ಆಗುತ್ತೆ. ಅದನ್ನ ನಾವು ಹೇಳ್ತಾ ಇಲ್ಲಾ ಸ್ವತಃ ಹಣ ಕೊಟ್ಟವರೆ ಹೇಳ್ತಾರೆ ಕೇಳಿ.

ಡಿಡಿಪಿಐ ಹನುಮಂತಪ್ಪ ಮೇಲೆ ಹತ್ತಾರು ಕಂಪ್ಲೆಂಟ್ ಗಳು ಕೇಳಿ ಬರುತ್ತಿವೆ. ಖಾಸಗಿ ಶಾಲೆ ಮತ್ತು ಶಿಕ್ಷಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ವಂತೆ, ಆರ್ ಎಂ ಎ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಹೀಗೆ ಸಾರ್ವಜನಿಕರಿಂದ ಡಿಡಿಪಿಐ ವಿರುದ್ಧ ಹಲವು ಕಂಪ್ಲೆಂಟ್ ಗಳು ಬಂದ ಹಿನ್ನೆಲೆ ಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜ ಕ್ರಮ ಕೈಗೊಂಡಿದ್ದಾರೆ. ಕಳೆದ 26 ರಂದು ಕಡ್ಡಾಯ ರಜೆಯ ಮೇಲೆ ಹೋಗುವಂತೆ ನೋಟಿಸ್ ಜಾರಿಮಾಡಿದ್ದಾರೆ. ಆದ್ರು ಆಫಿಸ್ ಬಿಟ್ಟು ಹೋಗದೆ ಅಲ್ಲಿಯೇ ಕುಳಿ ಲಂಚ ಪೀಕುತ್ತಿದ್ದು ಹನುಮಂತಪ್ಪನ ಅಸಲಿ ಮುಖವಾಡ ಬಟಾಬಯಲಾಗಿದೆ. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಸ್ ಎಫ್ ಐ ಸಂಘಟನೆಯ ಕಾರ್ಯಕರ್ತರು ಗಂಗಾವತಿಯ ಬಿಇಓ ಕಛೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನ ಕೂಡಲೆ ಅಮಾನತ್ತು ಮಾಡ ಬೇಕು, ಇಲ್ಲದಿದ್ರೆ ಉಘ್ರವಾದ ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.

ಇತ್ತ ಖಾಸಗಿ ಶಾಲೆಗಳು ಮನ ಬಂದಂತೆ ಹಣ ಪೀಕುತ್ತಿದ್ರು ಡಿಡಿಪಿಐ ಹನುಮಂತಪ್ಪ ಮಾತ್ರ ಇದು ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕಂದ್ರೆ ಇವರೆಲ್ಲ ಈತನಿಗೆ ಮುಟ್ಟಿಸ ಬೇಕಾದ ಮಾಮುಲು ಮುಟ್ಟಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಅದಕ್ಕಾಗು ಖಾಸಗಿ ಶಾಲೆಗಳಿ LKG ತರಗತಿಗೆ 50 ಸಾವಿರ ವರೆಗೆ ಹಣ ಪೀಕುತ್ತಿದ್ದಾರೆ. ಇಂತಹ ಶಾಲೆಗಳಲ್ಲಿ ಬಡವರ ಮಕ್ಕಳಾದ್ರು ಓದಲು ಹೇಗೆ ಸಾಧ್ಯ ಅಂತ ಪೋಷಕರು ಶಿಕ್ಷಣಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಏನೆ ಆಗಲಿ, ತಪ್ಪು ಮಾಡುತ್ತಿರುವ ಶಿಕ್ಷಣ ಸಂಸ್ಥೇಗಳ ವಿರುದ್ಧ ಕ್ರಮ ಕೈಗೊಂಡು ಸೂಕ್ತ ಸೌಲಭ್ಯ ಕೊಡಿಸಬೇಕಾದ ಡಿಡಿಪಿಐ ತಾವೇ ತಪ್ಪು ದಾರಿ ತುಳದಿದ್ದಾರೆ. ಭ್ರಷ್ಟ ಡಿಡಿಪಿಐ ಹನುಮಂತಪ್ಪ ನಿಗೆ ಸಂಬಂಧಿಸಿದ ಮೇಲಾಧಿಕಾರಿಗಳು ತಕ್ ಪಾಠ ಕಲಿಸಬೇಕಿದೆ.