ಕೊಪ್ಪಳ ಯಶಸ್ವಿ ಬಂದ್

ಕ್ರೌರ್ಯದ ವಿರುದ್ದ ಧ್ವನಿ ಎತ್ತಿದ ಕೊಪ್ಪಳ, ಭಾಗ್ಯನಗರ ನಾಗರಿಕರು

ಕೊಪ್ಪಳ : ಕು.ದಾನಮ್ಮ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ವಿರೋಧಿ ವೇದಿಕೆ ಇಂದು ಕರೆ ನೀಡಿದ್ದ ಕೊಪ್ಪಳ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಕೊಪ್ಪಳ ನಗರದ ಇತಿಹಾಸಿದಲ್ಲಿಯೆ ದಲಿತ, ಮುಸ್ಲಿಂ ಮತ್ತು ವಿವಿಧ ಪ್ರಗತಿಪರ

ಸಂಘಟನೆಗಳವರ ನೇತೃತ್ವದಲ್ಲಿ ನಡೆದ ಬಂದ್ ಕರೆ ಇಡೀ ಕೊಪ್ಪಳ ಸ್ಪಂದಿಸಿ ಯಶಸ್ವಿಗೊಳಿಸಿದಿದೆ.
ವಿಜಯಪುರ ಬಾಲಕಿ ದಾನಮ್ಮ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹಾಗೂ ಕೇಂದ್ರ ಸಚಿವ ಅನಂತಕುಮಾರರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳ ಕುರಿತು ಕೂಲಂಕುಷ ತನಿಖೆಗೆ ಹಾಗೂ ಮಹಾರಾಷ್ಟ್ರದ ಕೋರೇಗಾಂವ ನ 200 ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಯನ್ನು ಖಂಡಿಸಿ ಇಂದು ಕೊಪ್ಪಳ ಬಂದ್ಗೆ ಕರೆ ನೀಡಲಾಗಿತ್ತು. ಸ್ವಯಂಪ್ರೇರಿತ ಬಂದ್‍ಗೆ ಪೂರಕವಾಗಿ ಸ್ಪಂದಿಸಿದ ನಾಗರಿಕರು, ವರ್ತಕರು, ಶಾಲಾ ಕಾಲೇಜು ಆಡಳಿತ ಮಂಡಳಿಯವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಈ ಬಂದ್ ಗೆ 60 ಕ್ಕೂ ಅಧಿಕ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದವು. ಇನ್ನು ಕೆಲವೆಡೆ ಬಂದ್ ವೇಳೆ ಪೆÇೀಲಿಸರೋಂದಿಗೆ ವಾಗ್ವಾದ ನಡೆದರೆ, ಕೆಲವೆಡೆ ಕರವೇ ಕಾರ್ಯಕರ್ತರನ್ನು ಕೂಡಾ ಪೆÇೀಲಿಸರು ಬಂಧಿಸಿದರು.ಬಂದ್ ಹಿನ್ನಲೆಯಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳನ್ನು ನಡೆಯದಂತೆ ಬಿಗಿ ಪೆÇೀಲಿಸ್ ಬಂದೋ ಬಸ್ತ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬಂದ್ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಸಾರಿಗೆ ಸಂಸ್ಥೆಗಳ ಬಸ್ಗಳ ಸಂಚಾರ ಪೂರ್ಣ ಸ್ತಬ್ದಗೊಂಡಿತ್ತು, ಇನ್ನು ಚಿತ್ರ ಮಂದಿರ, ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್ ಸಂಪೂರ್ಣವಾಗಿ ಬಂದು ಮಾಡಿ ಬಂದ್ ಗೆ ಬೆಂಬಲ ವ್ಯಕ್ತ ಪಡಿಸಿದರು. ಖಾಸಗಿ ಶಾಲಾ ಕಾಲೇಜ್ಗಳಿಗೆ ಕೂಡಾ ರಜೆಯನ್ನು ನೀಡಲಾಗಿತ್ತು. ಬೆಳಿಗ್ಗೆ ಕೊಪ್ಪಳ ರೇಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ಕರವೇ ಯುವಸೇನೆ ಕಾರ್ಯಕರ್ತರು ರೇಲ್ವೆ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಇದರಿಂದಾಗಿ ಪೆÇಲೀಸರು ಕಾರ್ಯಕರ್ತರನ್ನು ತಡೆದರು. ಹೀಗಾಗಿ, ಕಾರ್ಯಕರ್ತರು ತಮ್ಮ ಮೈಮೇಲಿನ ಬಟ್ಟೆ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೆÇಲೀಸರು ಅವರನ್ನು ಬಂಧಿಸಿದರು. ಇನ್ನು ಬೆಳಿಗ್ಗೆ ನಗರದ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರ ಹಾಗೂ ಪೆÇಲೀಸರ ನಡುವೆ ವಾಗ್ವಾದವೂ ನಡೆಯಿತು. ಬೆಳಿಗ್ಗೆಯಿಂದಲೇ ನಗರದ ವಿವಿಧ ಬಡಾವಣೆಗಳಿಗೆ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾ ಕಾರರು ಬಂದ್ ಗೆ ಬೆಂಬಲ ವ್ಯಕ್ತ ಪಡಿಸುವಂತೆ ಮನವಿ ಮಾಡಿದರು. ಮದ್ಯಾಹ್ನ 12 ಗಂಟೆಗೆ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಅಂಬೇಡ್ಕರ್ ಸರ್ಕಲ್ – ಗಡಿಯಾರ ಕಂಬದಿಂದ ಅಶೋಕ ವೃತ್ತದ ವರೆಗೆ ಆಗಮಿಸಿ, ಅಶೋಕ ವೃತ್ತದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ ಅವರಿಗೆ ಮನವಿಯನ್ನು ಸಲ್ಲಿಸುವದರ ಮೂಲಕ ಬಂದ್ ಗೆ ಪೂರ್ಣ ವಿರಾಮ ಹೇಳಿದರು. ಒಟ್ಟಾರೆಯಾಗಿ ವಿವಿಧ ಬೇಡಿಕೆಗಳನಿಟ್ಟು ಇಂದು ನಡೆದ ಕೊಪ್ಪಳ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು ಅಲ್ಲದೇ ಮುಸ್ಲಿಂ, ದಲಿತ ಸಂಘಟನೆಗಳು ಸೇರಿದಂತೆ ಮಾನವೀಯ ಮಿಡಿತದ ಸಂಘಟನೆಗಳು ಭಾಗಿಯಾಗಿ ಹೊಸ ಇತಿಹಾಸ ನಿರ್ಮಿಸಿದವು.
ಬಂದ್ ಪ್ರತಿಭಟನಾ ಮೆರವಣಿಗೆಯಲ್ಲಿ ಮುತ್ತುರಾಜ್ ಕುಷ್ಟಗಿ, ರಾಜಾಬಕ್ಷಿ ಎಚ್,ವಿ., ಅಮ್ಜದ್ ಪಟೇಲ್, ಶಿವಾನಂದ ಹೊಸಮನಿ, ಪ್ರಕಾಶ ದಾಸರ್, ನಾಗರಾಜ್ ಬೆಲ್ಲದ, ಯಲ್ಲಪ್ಪ ಬಳಗಾನೂರ, ರಮೇಶ ಬೆಲ್ಲದ, ಸಲಿಂ ಮಂಡಲಗೇರಿ, ಈಶಣ್ಣ ಕೊರ್ಲಹಳ್ಳಿ, ರಾಜೇಶ ಸಸಿಮಠ, ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ್, ಹೇಮರಾಜ್ ವೀರಾಪೂರ,ವಿ.ಬಿ.ರಡ್ಡೇರ್, ನಗರಸಭಾ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಸಭಾ ಸದಸ್ಯರಾದ ಜಮಾದಾರ್, ಬಾರಕೇg, ಮಾನ್ವಿ ಪಾಷಾ, ಕಾಟನ್ ಪಾಶಾ, ಚಿಕನ್ ಪೀರಾ, ಮೈಲೈಕ್ ಜೀಲಾನ್, ಪೀರಸಾಬ ಬೆಳಗಟ್ಟಿ, À ಕ.ಎಸ್.ಕೊಡತಗೇರಿ, ಸಂದ್ಯಾ ಮಾದಿನೂರ, ಮಮ್ತಾಜ್ ಬೇಗಂ, ಸಾವಿತ್ರಿ ಮುಜುಂದಾರ್, ಸಬಿಯಾ ಪಟೇಲ್, ಜ್ಯೋತಿ ಹಿಟ್ನಾಳ. ಜೀಶಾನ್, ಸೇರಿದಂತೆ ವಿವಿಧ ಸಂಘಟನೆಯ ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.

Please follow and like us:
error