ಕೊಪ್ಪಳ: ಮೇ.09 ರಂದು ವಿದ್ಯುತ್ ವ್ಯತ್ಯಯ

ಕೊಪ್ಪಳ, ಮೇ. : ಕೊಪ್ಪಳ ನಗರದ ಜೆಸ್ಕಾಂನ ಉಪವಿಭಾಗ ವ್ಯಾಪ್ತಿಗೆ ಬರುವ 110 ಕೆ.ವಿ. ಹರೇಕೃಷ್ಣದಿಂದ ಕೊಪ್ಪಳ ಹೊಸ ಮಾರ್ಗವನ್ನು ಚಾಲನೆಗೊಳಿಸಬೇಕಾಗಿರುವುದರಿಂದ ಈ  ಮಾರ್ಗದಲ್ಲಿ ಪರಿವೀಕ್ಷಣೆ ಹಾಗೂ ತಪಾಸಣಾ ಕಾರ್ಯ ನಡೆಸುತ್ತಿರುವ ಪ್ರಯುಕ್ತ ಮೇ.09 ರಂದು ನಗರದ ವಿವಿಧೆಡೆ ಹಾಗೂ ಜಿಲ್ಲೆಯ ಇತರೆ ಪ್ರದೇಶದಲ್ಲಿ ಬೆಳಗ್ಗೆ 08 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಅಂದು ಕೊಪ್ಪಳ ನಗರ ವ್ಯಾಪ್ತಿಗೆ ಬರುವ ಭಾಗ್ಯನಗರ, ಡಿ.ಸಿ. ಆಫೀಸ್, ಗವಿಮಠ, ಬನ್ನಿಕಟ್ಟಿ, ಗೊಂಡಬಾಳ, ಕಾಮನೂರು ಐ.ಪಿ ಮಾರ್ಗ, ಬಸಾಪುರ ಐ.ಪಿ ಕುಡಿಯುವ ನೀರಿನ ಮಾರ್ಗ, ಎಲ್.ಐ.ಎಸ್, ಬಗನಾಳ ಐ.ಪಿ ಫೀಡರ್‌ಗಳು ಮತ್ತು 110/30 ಕೆ.ವಿ ವ್ಯಾಪ್ತಿಗೆ ಬರುವ ಕಿನ್ನಾಳ, ಹಿರೇಸಿಂದೋಗಿ ವಿದ್ಯುತ್ ವಿತರಣಾ ಉಪ-ಕೇಂದ್ರಕ್ಕೆ ಒಳಪಡುವ ಎಲ್ಲಾ ಗ್ರಾಮಗಳು ಮತ್ತು ಐ.ಪಿ ಮಾರ್ಗಗಳು, ಗಿಣಿಗೇರಾದಿಂದ ವಿದ್ಯುತ್ ಸಂಪರ್ಕ ಹೊಂದಿರುವ 11 ಕೆ.ವಿ ಒಳಪಡುವ ವಿದ್ಯುತ್ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ದುರಸ್ತಿ ಕಾರ್ಯವು ಬೇಗನೆ ಮುಗಿದಲ್ಲಿ ಯಾಔಉದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾಔಉದೇ ವಿದ್ಯುತ್ ದುರಸ್ತಿ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ತಿಳಿಸುತ್ತಾ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಜೆಸ್ಕಾಂಗೆ ಸಹಕರಿಸಬೇಕೆಂದು   ತಿಳಿಸಿದ್ದಾರೆ.

Please follow and like us:
error