ಕೊಪ್ಪಳ ಮೇಲ್ಛಾವಣಿ ಕುಸಿದು ಮೂವರ ಸಾವು

ಕೊಪ್ಪಳ : ಮನೆಯ ಛತ್ತು ಕುಸಿದು ಬಿತ್ತು ಮೂವರು ಮೃತಪಟ್ಟ ಧಾರಯಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಮಗೇರಿಯ ಗ್ರಾಮದಲ್ಲಿ ಬೆಳಗಿನ ಜಾವ ಮೂರುವರೆ ಸುಮಾರಿಗೆ ಘಟನೆ ನಡೆದಿದೆ. ಹಳೆಯದಾದ ಮಣ್ಣಿನ ಛತ್ತು  ಇತ್ತು. ಕಳೆದ ಕೆಲವು ದಿನಗಳಿಂದ ಮಳೆ ಜಿಟಿಜಿಟಿಯಾಗಿ ಬರುತ್ತಲೇ ಇತ್ತು  ಇದರಿಂದ ಸಂಪೂರ್ಣ ನೆಂದಿತ್ತು ಎನ್ನಲಾಗಿದೆ ಸುಜಾತ(22), ಅಮರೇಶ(18), ಗವಿಸಿದ್ದಪ್ಪ(15) ಮೃತ ದುರ್ದೈವಿಗಳು.ಸೋಮಣ್ಣ ಕುದುರಿಮೋತಿ ಸಾವಿನ 

ದವಡೆಯಿಂದ ಪಾರಾದ ತಂದೆ. ತಂದೆಯ ಎದುರೆ ಮೂರು ಜನ ಮಕ್ಕಳು ಪ್ರಾಣಬಿಟ್ಟಿದ್ದಾರೆ. ರಾತ್ರಿ ಸುಮಾರು ೩ಗಂಟೆಯ ಹೊತ್ತಿಗೆ ಮಳೆ ಹನಿ ಸುರಿದಿದೆ. ತಂದೆ ಮತ್ತು ಮಕ್ಕಳು ಎಲ್ಲರೂ ಹೊರಗಡೆ ಮಲಗಿದ್ದರು. ಮಳೆಯಿಂದಾಗಿ ಮೂವರು ಮಕ್ಕಳು ಒಳಹೋಗಿ ಮಲಗಿದ್ದಾರೆ ಆಗ ಏಕಾಏಕಿ ಛತ್ತು ಕುಸಿದು ಬಿದ್ದಿದೆ. ಮೈಮೇಲೆ ಒಮ್ಮೆಲೆ ಮಣ್ಣು ಹಾಗೂ ಜಂತಿಗಳು ಬಿದ್ದಿದೆ. ಮಣ್ಣು ಮತ್ತು ಕಟ್ಟಿಗೆಗಳನ್ನು ತೆರವುಗೊಳಿಸುವುದೊರಳಗೆ ಮೂವರು ಸಾವನ್ನಪ್ಪಿದ್ದಾರೆ. ಜೀವಗಳು ಬದುಕಬಹುದು  ಎನ್ನುವ ನಿರೀಕ್ಷೆಯಲ್ಲು  ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಮೂವರೂ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Please follow and like us:
error