“ಕೊಪ್ಪಳ ಮಾವು” ಬ್ರ್ಯಾಂಡ್ ನೇಮ್ ಗೆ ಚಾಲನೆ

ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮರಾಟ ನಿಗಮ ಇವರ ಸಹಯೋಗದಲ್ಲಿ ನೈಸರ್ಗಿಕ ಮತ್ತು ವೈಜ್ಞಾನಿಕ ಮಾಗಿಸಿದ ಹಣ್ಣುಗಳಿಗೆ ” ಕೊಪ್ಪಳ ಮಾವು” ಶೀರ್ಷಿಕೆಯಡಿ ಮಾವು ಬಾಕ್ಸ್ ಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಅಮರೇಗೌಡ ಬಯ್ಯಾಪೂರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ಅನಿವಾರ್ಯ ಕಾರಣಗಳಿಂದ ಸಚಿವರ ಪ್ರವಾಸ ರದ್ಧಾಗಿದ್ದು, ಸರಳವಾಗಿ ಕಾರ್ಯಮವನ್ನು ಜರುಗಿಸಲಾಯಿತು. ಉಪ್ಪಿನಕಾಯಿ ಮಾವು ಹಾಗೂ ಹಣ್ಣಿನ ಮಾವು ಬಾಕ್ಸ್ ಗಳನ್ನು ಉದ್ಘಾಟಿಸಲಾಯಿತು. ಉಪ್ಪಿನಕಾಯಿ ಬಾಕ್ಸ್ ೨.೫ ಕೆ.ಜಿ ಒಂದಕ್ಕೆ ₹೧೦೦, ಹಾಗೂ ಮಾವಿನ ಹಣ್ಣಿನ ೨.೫ ಕೆಜಿ ಬಾಕ್ಸ್ ಗೆ ₹೨೫೦ ಬೆಲೆ ನಿಗಧಿ ಪಡಿಸಲಾಗಿದೆ. ನೇರವಾಗಿ ಗ್ರಾಹಕರ ಮನೆಗೆ ತಲುಪಲಿದೆ. ಇದು ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾವು ಬೆಳೆಗಾರರು ಮಾರುಕಟ್ಟೆ ಕಲ್ಲಪಿಸಲು ಮಾಡಿರುವ ನೂತನ ಐಡಿಯಾ. ದಶಹರಿ, ಚಿನ್ನರಸಂ, ಕೇಸರ್ , ಇಮಾಮ ಪಸಂದ, ತೋತಾಪುರಿ, ನೀಲಂ, ಪುನಾಸ್, ಬೇನೆಶಾನ, ಮಲ್ಲಿಕಾ ಸೇರಿದಂತೆ ಹಕವು ಮಾವಿನ ತಳಿಗಳ ಹಣ್ಣುಗಳು ಬಾಕ್ಸ್ ಲ್ಲಿ ಲಭ್ಯವಿರುವುದಾಗಿ ತೋಟಗಾರಿಕೆ ಇಲಾಖೆಯ ಡಿಡಿ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

Please follow and like us:
error