ಕೊಪ್ಪಳ ಮತ್ತೊಬ್ಬ ರೈತ ಸಾವಿಗೆ ಶರಣು

ಕೊಪ್ಪformer-suicide-koppalಳ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಮುಂದುವರೆದಿದ್ದು ಇವತ್ತು ಮತ್ತೊಬ್ಬ ರೈತ ಸಾವಿಗೆ ಶರಣಾಗಿದ್ದಾನೆ. ಕೊಪ್ಪಳ ತಾಲೂಕಿನ ಇರಕಲ್ ಗಡ ನಿವಾಸಿ ಲಕ್ಷ್ಮಣ ಕಾಗಿ ೪೦ ನೇಣಿಗೆ ಶರಣಾದ ರೈತ. ಬಹಳಷ್ಟು ಸಾಲ ಮಾಡಿಕೊಂಡಿದ್ದ ಎಂದುಹೇಳಲಾಗಿದ್ದು   ಕುರಿ ಸಾಕಾಣಿಕೆಯಲ್ಲೂ ನಷ್ಟ ವಾಗಿತ್ತು, ಸತತ ಬರಗಾಲದಿಂದ ಏನೂ ಬೆಳೆಯಲಾಗದೇ  ಸಂಕಷ್ಟದಲ್ಲಿದ್ದ ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೇ ಮನೆಯಲ್ಲಿ ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾನೆ. ಲಕ್ಷ್ಮಣ  ಕಾಗಿಗೆ ೫ ಎಕರೆ ಜಮೀನಿದೆ.೪ ಹೆಣ್ಣು ಮಕ್ಕಳಿದ್ದಾರೆ. ೧.೫೦ ಲಕ್ಷ ರೂಪಾಯಿಗೂ ಹೆಚ್ಚು ಸಾಲವಿದೆ ಎಂದು ಹೇಳಲಾಗಿದೆ. ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Related posts

Leave a Comment