fbpx

ಕೊಪ್ಪಳ ಜಿಲ್ಲೆ ಒಟ್ಟು ಮತದಾರರ ವಿವರ: ವಿಧಾನಸಭಾ ಕ್ಷೇತ್ರಾವಾರು

Koppal District Voters Details  Total Voters by constituency Details
ಕೊಪ್ಪಳ ಮಾ  ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಫೆ. ೨೮ ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹತಾ ದಿನಾಂಕ: ೨೦೧೮ ರ ಜನವರಿ ೦೧ ರ ಆಧಾರದ ಮೇಲೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಂತೆ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಫೆ. ೨೮ ರಂದು ಪ್ರಕಟಿಸಲಾಗಿದೆ.
ಫೆ. ೨೮ ರಂದು ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯನ್ವಯ ಕೊಪ್ಪಳ ಜಿಲ್ಲೆಯಲ್ಲಿ ಪುರುಷ-೫೩೫೮೭೪, ಮಹಿಳೆ- ೫೩೩೩೨೫, ಒಟ್ಟು- ೧೦೬೯೧೯೯ ಮತದಾರರಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ-೧೧೩೧೩೪, ಮಹಿಳೆ- ೧೧೦೫೩೧, ಒಟ್ಟು- ೨೨೩೬೬೫ ಮತದಾರರಿದ್ದಾರೆ. ಕನಕಗಿರಿ : ಪುರುಷ-೧೦೪೦೮೫, ಮಹಿಳೆ-೧೦೫೭೭೯, ಒಟ್ಟು- ೨೦೯೮೬೪. ಗಂಗಾವತಿ: ಪುರುಷ- ೯೬೧೭೮, ಮಹಿಳೆ-೯೬೫೩೮, ಒಟ್ಟು-೧೯೨೭೧೬. ಯಲಬುರ್ಗಾ : ಪುರುಷ- ೧೦೩೩೧೩, ಮಹಿಳೆ- ೧೦೧೨೧೩, ಒಟ್ಟು- ೨೦೪೫೨೬. ಕೊಪ್ಪಳ ವಿಧಾನಸಭಾ ಕ್ಷೇತ್ರ: ಪುರುಷ- ೧೧೯೧೬೪, ಮಹಿಳೆ- ೧೧೯೨೬೪, ಒಟ್ಟು- ೨೩೮೪೨೮.
ಸಾರ್ವಜನಿಕರು ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಹಾಗೂ ಎಲ್ಲ ತಹಸಿಲ್ದಾರರ ಕಚೇರಿಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ  ತಿಳಿಸಿದ್ದಾರೆ.

Please follow and like us:
error
error: Content is protected !!