ಕೊಪ್ಪಳ : ಭೀಕರವಾಗಿ ಹೆಂಡತಿಯ ಕತ್ತು ಕೊಯ್ದು ಕೊಂದ ಗಂಡ

ಕೊಪ್ಪಳ ಜಿಲ್ಲೆಯಲ್ಲೊಂದು ಅಮಾನುಷ ಘಟನೆ

Koppal crimeNews : ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಗಂಡನೇ ಹೆಂಡತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ವಿಟ್ಲಾಪೂರ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಸುಮಾರು 28 ವರ್ಷದ ಯಮನಮ್ಮ ಎಂಬ ಮಹಿಳೆಯೆ ಕೊಲೆಯಾದ ನತದೃಷ್ಟೆ. ಗಂಡ ದುರುಗೇಶ ಕರೇಕಲ್ ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಅನುಮಾನಿಸಿ ಹಲವು ಬಾರೀ ಕೌಟುಂಬಿಕ ಕಲಹ ಸಹ ನಡೆದಿತ್ತು ಎನ್ನಲಾಗಿದೆ. ತವರು ಮನೆಯಲ್ಲಿ ಇದ್ದ ಯಮನಮ್ಮಳನ್ನು ಕರೆಯಲು ಹೋಗಿದ್ದ ದುರುಗೇಶ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದ, ಈ ವೇಳೆ ಕುಪಿತಗೊಂಡ ಪಾಪಿ ಪತಿರಾಯ ಕಟ್ಟಿಕೊಂಡಿದ್ದ ಹೆಂಡತಿಯ ರುಂಡವನ್ನ ಕೊಯ್ದು ಭೀಕರವಾಗಿ ಹತ್ಯಗೈದಿದ್ದಾನೆ. ಹೆಂಡತಿಯನ್ನ ಕೊಲೆ ಮಾಡಿ ನೇರವಾಗಿ ಕನಕಗಿರಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ನನ್ನ ಹೆಂಡತಿಯನ್ನ ನಾನೆ ಕೊಲೆ ಮಾಡಿದ್ದೇನೆಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Please follow and like us:
error