ಕೊಪ್ಪಳ ಬಿಟಿಪಾಟೀಲ್ ನಗರ ಕೇಸ್ : ಎಲ್ಲ ಪ್ರಾಥಮಿಕ ಸಂಪರ್ಕಗಳು ನೆಗೆಟಿವ್

ಕೊಪ್ಪಳ ನಗರದ ಜನತೆಗೆ ಸಮಾಧಾನ ನೀಡುವ ಸಂಗತಿ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ  ಬಹಳಷ್ಟು ಆತಂಕಕ್ಕೆ ಕಾರಣವಾಗಿದ್ದ ಬಿ.ಟಿ.ಪಾಟೀಲ್ ನಗರದ  ಪಿ 3009 ಸಂಬಂದಪಟ್ಟ ವರದಿಗಳು ಬಂದಿದ್ದು ಎಲ್ಲ ಸಂಪರ್ಕಗಳು ನೆಗೆಟಿವ್ ರಿಜಲ್ಟ್ ಬಂದಿವೆ. ಪಿ 3009 ರ ಕುಟುಂಬಕ್ಕೆ ಸಂಬಂದಪಟ್ಟ  ಬೆಂಗಳರೂರಿನಲ್ಲಿದ್ದ 2 ಪ್ರಾಥಮಿಕ ಸಂಪರ್ಕಗಳು  ನೆಗೆಟಿವ್ ಬಂದಿವೆ. ಅಲ್ಲದೇ ಒಟ್ಟು ಪ್ರಾಥಮಿಕ ಸಂಪರ್ಕಗಳು 14 ಎಲ್ಲವೂ ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ  ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದು ಕೊಪ್ಪಳ ನಗರದ ಜನತೆಗೆ ಸಮಾಧಾನ ನೀಡುವ ಸಂಗತಿಯಾಗಿದ್ದು ಇಡೀ ನಗರದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು -505 (392 ಅಂತರ ರಾಜ್ಯ ರಿಟರ್ನೀಸ್ + 67 ಪ್ರಾಥಮಿಕ ಸಂಪರ್ಕಗಳು + 46 ದ್ವಿತೀಯ ಸಂಪರ್ಕಗಳು)

ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು 119 (ಮಹಾರಾಷ್ಟ್ರ 62 + ಟಿಎನ್ 20 + ಗುಜ್ 9 + ಇತರರು 28).

 

Please follow and like us:
error