ಕೊಪ್ಪಳ ಬಿಜೆಪಿ ಟಿಕೇಟ್ ಪೈನಲ್ ಆಯ್ತಾ?

ಕೊಪ್ಪಳ : ಮುಂಬರುವ ವಿಧಾನಸಭಾ ಚುನಾವಣೆಗೆ ಕೊಪ್ಪಳ ಬಿಜೆಪಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಬಹಳ ದಿನಗಳಿಂದ ಚರ್ಚಿತ ವಿಷಯವಾಗಿದೆ. ಸಂಸದ ಕರಡಿ ಸಂಗಣ್ಣರ ಕುಟುಂಬದಿಂದ

ಅಮರೇಶ ಕರಡಿ , ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಪ್ರಬಲ ಆಕಾಂಕ್ಷಿಗಳು ಎಂದೇ ಹೇಳಲಾಗುತ್ತಿದೆ. ಕಳೆದ ವರ್ಷದಿಂದ ಅಮರೇಶ ಕರಡಿ ನಿರಂತರವಾಗಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿ.ವಿ.ಚಂದ್ರಶೇಖರ ಕಾದು ನೋಡುವ ತಂತ್ರ ಅನುಸರಿಸುತ್ತಾ ಮೌನವಾಗಿದ್ದರು. ಬ್ಯಾನರ್, ಜಾಹೀರಾತುಗಳಿಂದ ದೂರ ಇದ್ದರು. ಆದರೆ ಏಕಾಏಕಿ ಕೊಪ್ಪಳದ ತುಂಬಾ ಸಿ.ವಿ.ಚಂದ್ರಶೇಖರರ ಶುಭಾಷಯ ಬ್ಯಾನರ್ ಗಳು ಕಾಣಿಸಿಕೊಂಡಿವೆ. ಸಂಸದ ಕರಡಿ ಸಂಗಣ್ಣನವರ ಜೊತೆಗಿನ ಈ ದೊಡ್ಡ ಬ್ಯಾನರ್ ಗಳು ನೋಡಿ ಜನ ಕೇಳ್ತಾ ಇದ್ದಾರೆ.. ಕೊಪ್ಪಳ ಬಿಜೆಪಿ ಟಿಕೆಟ್ ಪೈನಲ್ ಆಯ್ತಾ?

Please follow and like us:
error