You are here
Home > Koppal News > ಕೊಪ್ಪಳ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಕೊಪ್ಪಳ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಸ್ವಘೋಷಿತ ಅಭ್ಯರ್ಥಿಯ ವಿರುದ್ದ ತಿರುಗಿಬಿದ್ದ ನಾಯಕರು.. ಬಿಜೆಪಿ ನಾಯಕನ ವಿರುದ್ದವೇ ತಿರುಗಿ ಬಿದ್ದ ಬಿಜೆಪಿ ನಾಯಕರು..  ಕನಕಗಿರಿ ಕ್ಷೇತ್ರದಲ್ಲಿ  ಭುಗಿಲೆದ್ದ ಬಿಜೆಪಿ ಪಕ್ಷದ ಭಿನ್ನಮತ..ದಡೆಸೂಗೂರು ಬಸವರಾಜ್ ವಿರುದ್ದ ತಿರುಗಿಬಿದ್ದ ಬಿಜೆಪಿ ನಾಯಕರು.. ಟಿಕೇಟ್ ಘೋಷಣೆ ಆಗದಿದ್ದರೂ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರೋ ದಡೆಸೂಗೂರು ಬಸವರಾಜ್. ಬಸವರಾಜ್ ನಡೆಯಿಂದ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು. ಅಸಮಾಧಾನ ತೋಡಿಕೊಂಡ ಬಿಜೆಪಿ ನಾಯಕರು.. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬೀದಿಗೆ ಬಂದ ಬಿಜೆಪಿ ಜಗಳ..
 
ಚುನಾವಣಾ ಹತ್ತಿರವಾಗುತ್ತಿದ್ದಂತಯೇ ಬಿಜೆಪಿಯಲ್ಲಿ ಭಿನ್ನಮತದ ಹೊಗೆ ಮತ್ತೆ ಹೊತ್ತಿ ಉರಿಯುತ್ತಿದೆ.ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಿದ್ದು, ಬಿಜೆಪಿ ಮುಖಂಡನ ವಿರುದ್ದ ಬಹಿರಂಗವಾಗಿಯೇ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಬಸವರಾಜ್ದ ಡೇಸೂಗೂರು  ನಾನೇ ಬಿಜೆಪಿ ಅಭ್ಯರ್ಥಿಯೆಂದು ಘೋಷಣೆ ಮಾಡಿಕೊಂಡಿದ್ದೆ ಇದಕ್ಕೇಲ್ಲಾ ಕಾರಣವಾಗಿದ್ದು, ಬಸವರಾಜ್ ವಿರುದ್ದ ಇನ್ನೀತರ ಟಿಕೆಟ್ ಆಕಾಂಕ್ಷಿಗಳು ಫುಲ್ ಗರಂ ಆಗಿದ್ದಾರೆ.. ಬಿಜೆಪಿಯ ಪ್ರಮುಖ ಮುಖಂಡರಾದ ಮುಕುಂದರಾವ್ ಭವಾನಿಮಠ, ಲಂಕೇಶ್ ಗುಳದಾಳ್, ಗಾಯಿತ್ರಿ ತಿಮ್ಮಾರೆಡ್ಡಿ ಬಿಜೆಪಿ ಟಿಕೆಟ್  ಆಕಾಂಕ್ಷಿಗಳಾಗಿದ್ದಾರೆ. ಆದ್ರೆ ಬಸವರಾಜ್ ದಡೆಸೂಗೂರು ಮಾತ್ರ ಇವರನ್ನು ಪರಿಗಣಿಸಿದೇ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಬ್ಯಾನರ್ ಹಾಕಿಸಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಮುಖಂಡರು ಇದೀಗ ಬಸವರಾಜ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ  ಬಗ್ಗೆ ತಕ್ಷಣ ಹೈಕಮಾಂಡ್ಗೆ ನಾವು ದೂರು ನೀಡ್ತೀವಿ. ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತೋ ಅವರ ಜಯಕ್ಕೆ ನಾವು ಪರಿಶ್ರಮ ಪಡ್ತೀವಿ. ಆದ್ರೆ ದಡೆಸೂಗೂರು ಬಸವರಾಜ್ ಮಾತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೇಟ್ ಅನೌನ್ವ್ಸ್ ಆಗುವ ಮುಂಚೆನೆ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಗೊಂದಲವನ್ನುಂಟು ಮಾಡ್ತಾ ಇದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು. ಇನ್ನು ದಡೆಸೂಗೂರು ಬಸವರಾಜ್ ತನ್ನ ಬೆಂಬಲಿಗರಿಂದ ನಮಗೆ ಬೆದರಿಕೆ ಹಾಕುತ್ತಿದ್ದಾನಂದು ಗಂಭೀರವಾದ ಆರೋಪ ಬಿಜೆಪಿ ಮುಖಂಡರು ಮಾಡ್ತಾ ಇದ್ದಾರೆ..   ಕಳೇದ ವಿಧಾನಸಭಾ ಚುನಾವಣೆಯಲ್ಲಿ ದಡೆಸೂಗೂರು ಬಸವರಾಜ್ ಕೆಜೆಪಿಯಿಂದ ಸ್ಪರ್ಧಿಸಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಶಾಸಕ ಶಿವರಾಜ್ ತಂಗಡಗಿ ವಿರುದ್ದ ಸೋತಿದ್ರು.
Top