ಕೊಪ್ಪಳ ಬಂದ್ ವಿಫಲ

ಅಖಂಡ ಕರ್ನಾಟಕಕ್ಕೆ ಬೆಂಬಲ ನೀಡಿದ ಕೊಪ್ಪಳ ಜಿಲ್ಲೆ… ರಾಜ್ಯ ಹೋಳಾಗುವುದರ ವಿರುದ್ದ ಸಿಡಿದೆದ್ದು ಪ್ರತಿಭಟನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಇಂದು ಕರೆ ನೀಡಲಾಗಿದ್ದ ಬಂದ್ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬೆಳಗಿನ ಜಾವದಿಂದಲೇ ಯಥಾ ಪ್ರಕಾರ ಶಾಲಾ ಕಾಲೇಜುಗಳು ಆರಂಭವಾಗಿದ್ದವು.ವಾಹನ ಸಂಚಾರ ಎಂದಿನಂತೆ ಇತ್ತು. ಅಲ್ಲದೇ ಕೊಪ್ಪಳ ಜಿಲ್ಲೆ ಬಂದ್ ಗೆ ಯಾವುದೇ ಸಂಘಟನೆ ಯವರು ಬೆಂಬಲ ಕೊಟ್ಟಿಲ್ಲ. ಆದರೆ ಇಂದು ಕನ್ನಡ ಪರ ಸಂಘಟನೆ ಗಳು ಬೀದಿಗಿಳಿದು ಅಖಂಡ ಕರ್ನಾಟಕ ದ ಪರವಾಗಿ ಧ್ವನಿ ಎತ್ತಿದವು.

ಅಲ್ಲದೇ ಹೈದ್ರಾಬಾದ್ ಕರ್ನಾಟಕ ಯಾವತ್ತೂ ಅಖಂಡ ಕರ್ನಾಟಕದ ಪರವಾಗಿ ಇರುತ್ತೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ..