ಕೊಪ್ಪಳ ಪೋಲಿಸರ ಬಲೆಗೆ ಬಿದ್ದ ನಟೋರಿಯಸ್ ಗ್ಯಾಂಗ್

natorius-gang_koppal_arrest ಹಲವಾರು  ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಗ್ಯಾಂಗ್ ನ್ನು ಬಂಧಿಸುವಲ್ಲಿ ಕೊಪ್ಪಳ ಪೊಲಿಸರು ಯಶಸ್ವಿಯಾಗಿದ್ಧಾರೆ. ಆದರೆ ಬಂದಿತರ ಬ್ಯಾಂಕ್ ಗ್ರೌಂಡ್ ಕೇಳಿ ಪೊಲೀಸರೇ ದಂಗಾಗಿದ್ದಾರೆ.   ವಿಜಯಪುರದ ಇಂಡಿ ಮೂಲದ ಉಮೇಶ, ಶ್ರೀಶೈಲ್, ಕುಮಾರ್ ಬಂಧಿತರು. ಬಂದಿತರಿಂದ ಹಲವಾರು ಚಾಕು,ಡ್ರ್ಯಾಗರ್ ಹಾಗೂ ಕಬ್ಬಿಣದ ರಾಡುಗಳು ಸೇರಿದಂತೆ ಹಲವಾರು ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಮೊನ್ನೆಯ ದಿನ ರಾತ್ರಿ ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ತಂಡದ ಮೇಲೆ ದಾಳಿ ಮಾಡಿದ ನಗರಠಾಣೆಯ ಸಿಪಿಐ ರಮೇಶ ಉಕ್ಕುಂದರ ತಂಡ ಈ ನಟೋರಿಯಸ್ ಗ್ಯಾಂಗ್ ನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಇನ್ನಿಬ್ಬರು ರವಿ ಮತ್ತು ಭೀಮಾಶಂಕರ ಪರಾರಿಯಾಗಿದ್ದಾರೆ.

koppal-police ಕೊಪ್ಪಳ ಜಿಲ್ಲೆಯ ವಿವಿಧೆಡೆ ನಡೆದ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರನ್ನು ಬಂಧಿಸಿದ್ದ ಪೊಲೀಸರೇ ಇವರ ಕ್ರೈಮ್ ಇತಿಹಾಸವನ್ನು ಕಂಡು ದಂಗಾಗಿದ್ದಾರೆ. ವಿಜಯಪುರದ ಚಡಚಣ, ಝಳಕಿ, ಯಮಕನಮರಡಿ, ರಾಯಭಾಗ, ಗೋಳಗುಮ್ಮಟ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಡಕಾಯಿತಿ, ರಾಬರಿ, ಆಯುಧ ಕಾಯ್ದೆಯಡಿ ಇವರ ವಿರುದ್ದ ಪ್ರಕರಣಗಳು ದಾಖಲಾಗಿವೆ. ಇವರು ಅಂತರ್ ಜಿಲ್ಲಾ ದರೋಡೆಕರರಷ್ಟೇ ಅಲ್ಲದೇ ಅಂತರರಾಜ್ಯಮಟ್ಟದಲ್ಲಿಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ಧಾರೆ.  ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಹಲವಾರು ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆರೋಪಿಗಳನ್ನು ವಿಚಾರಣೆ ಮಾಡಿದ ಅವರಿಂದ 290 ಗ್ರಾಂ ಬಂಗಾರ, 350 ಗ್ರಾಂ ಬೆಳ್ಳಿ ಸಾಮಾನುಗಳನ್ನು ಹಾಗೂ  ಸ್ವಿಪ್ಟ್ ಕಾರನ್ನು  ಜಪ್ತಿ ಮಾಡಲಾಗಿದೆ.

Please follow and like us:

Leave a Reply