ಕೊಪ್ಪಳ : ನಾಲ್ವರು ಪಾಜಿಟಿವ್ ರೋಗಿಗಳು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ

ಕೊಪ್ಪಳ ಜನತೆಗೆ ನೆಮ್ಮದಿಯ ಸುದ್ದಿ

ಕೊಪ್ಪಳ : ಹೊಸದಾಗಿ ಬರುತ್ತಿದ್ದ ಪಾಜಿಟಿವ್ ಕೇಸ್ ಗಳಿಂದ ಕಂಗಾಲಾಗಿದ್ದ ಕೊಪ್ಪಳ ಜಿಲ್ಲೆಯ ಜನತೆಗೆ ನೆಮ್ಮದಿಯ ಸುದ್ದಿ ಕೊರೊನಾ ಸೋಂಕಿನಿಂದ ಗುಣಮುಖರಾದ ನಾಲ್ವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

KPL-6 P-5647, KPL-9 P-5835, KPL-10 P-5836, KPL-11 P-5837 ಯಶಸ್ವಿ ಚಿಕಿತ್ಸೆಯ ನಂತರ ಕೊಪ್ಪಳ ಜಿಲ್ಲಾ ಕೋವಿಡಿ -19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ನಾಲ್ವರ ಗಂಟಲು ಮಾದರಿ ಮರು ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರಿಂದ ಇವರನ್ನು ಬಿಡುಗಡೆ ಮಾಡಲಾಗಿದೆ . ಈವರೆಗೆ ಜಿಲ್ಲೆಯಲ್ಲಿ 8 ಜನರನ್ನು ಬಿಡುಗಡೆ ಮಾಡಲಾಗಿದೆ‌. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾದಂತಾಗಿದೆ.ಇನ್ನೂ 5 ಸಕ್ರಿಯ ಪ್ರಕರಣ ಬಾಕಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಮಾಹಿತಿ ನೀಡಿದ್ದಾರೆ

Please follow and like us:
error