ಕೊಪ್ಪಳ ನರ್ಸ್ ಸೇರಿ ಮೂವರಿಗೆ ಕರೋನಾ ಪಾಜಿಟಿವ್ ?

Koppal ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ ಸಂಖ್ಯೆ ಹೆಚ್ಚಾಗುತ್ತಿದೆ. ಕೊಪ್ಪಳದಲ್ಲೂ ಆರೋಗ್ಯ ಸಿಬ್ಬಂದಿಗೆ ಕೋವಿಡ್ ‌19 ದೃಢವಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಇಂದು ನರ್ಸ್ ಸೇರಿ 3 ಜನ್ರಿಗೆ ಸೋಂಕು ದೃಢವಾಗಿದೆ.ಶ್ರೀರಾಮನಗರದ ಟೀ ಶಾಪ್ ಮಾಲೀಕ, ನರ್ಸ್‌ ಹಾಗೂ ನಿನ್ನೆ ದಾಖಲಿಸಲಾದ ೩ ವರ್ಷದ ಮಗುವಿನ ತಂದೆಗೆ ಕೋವಿಡ್ 19 ದೃಢವಾಗಿದೆ.ನಿನ್ನೆ ಸೋಂಕು ದೃಢಪಟ್ಟಿದ್ದ 3 ವರ್ಷದ ಬಾಲಕಿ ತಂದೆಗೂ ಕೋವಿಡ್ 19 ಸೋಂಕು ಪತ್ತೆ

ಗಂಗಾವತಿ ಉಪ ವಿಭಾಗ ಆಸ್ಪತ್ರೆ ಸ್ಟಾಫ್ ನರ್ಸ್ ಗೆ ಸೋಂಕು ಪತ್ತೆಯಾಗಿದೆ. ಗಂಗಾವತಿಯ ವಡ್ಡರ ಓಣಿ ನಿವಾಸಿ 32 ವರ್ಷದ ನರ್ಸ್ ಗೆ ಸೋಂಕು ಪತ್ತೆಯಾಗಿದೆ. ಇವರು ಗಂಗಾವತಿ ತಾಲೂಕು ಬಸಾಪಟ್ಟಣ ಮೂಲದ ನರ್ಸ್. ಸ್ಥಳಕ್ಕೆ ನಗರಸಭೆ, ಕಂದಾಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಏರಿಯಾ ಸೀಲ್ ಡೌನ್ ಗೆ ಅಧಿಕಾರಿಗಳ ಚಿಂತನೆ ನಡೆಸಿದ್ದಾರೆ

ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ ರದ್ದು ಪಡಿಸಲು ನಿರ್ಧಾರ ಮಾಡಲಾಗುತ್ತಿದೆ.ಸಿಬ್ಬಂದಿ ಆಸ್ಪತ್ರೆ ಸ್ವಚ್ಛಗೊಳಿಸಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದ್ದಾರೆ ಇಬ್ಬರೂ ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಎಂದು ಹೇಳಲಾಗುತ್ತಿದೆ. ಜಿಲ್ಲಾಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕಿದೆ‌

Please follow and like us:
error