ಕೊಪ್ಪಳ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲು ಆಗ್ರಹ

ಕೊಪ್ಫಳ : ಕೊಪ್ಪಳ ನಗರಸಭೆಗೆ , ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಈ ಹಿಂದೆ ಮೀಸಲಾಗಿದ್ದ ರೀತಿಯಲ್ಲಿ ಬಿ . ಜೆ . ಪಿ . ನೇತೃತ್ವದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ 
ಆದೇಶ ಹೊರಡಿಸುವಂತ  ಸಂಸದರಾದ ಕರಡಿ ಸಂಗಣ್ಣನವರು ಒತ್ತಾಯಿಸಬೇಕೆಂದು ಜಿಲ್ಲೆಯ ಸಮಸ್ತ ಮಾದಿಗ ಸಮಾಜ ಮನವಿ ಮಾಡಿದೆ, ದಿನಾಂಕ : 03 – 09 – 2018ರಲ್ಲಿ ಸ್ಥಳೀಯ ನಗರಸಭೆ / ಪುರಸಭೆ | ಪಟ್ಟಣ ಪಂಚಾಯತಿವಾರು ಹಂಚಿಕೆ ಮಾಡಿದ ಮೀಸಲಾತಿಯನ್ನು ರದ್ದುಗೊಳಿಸಿ ಸರಕಾರ ಹಿಂಪಡೆದಿರುತ್ತದೆ . ಇದರಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದಲ್ಲದೆ ಸಾಮಾನ್ಯ ಜನರಿಗೆ ತುಂಬಲಾರದ ನಷ್ಟವಾಗುವುದರಿಂದ ಕೂಡಲ ಸರಕಾರ ಎಚ್ಚೆತ್ತುಕೊಂಡು ಸರಕಾರದ ಚುನಾವಣಾ ಆಯುಕ್ತರ ಗಮನಕ್ಕೆ ಹಾಗೂ ರಾಜ್ಯಪಾಲರ ಗಮನಕ್ಕೆ ತರಬಯಸುವುದೇನೆಂದರೆ ಈ ಹಿಂದೆ ಪ್ರಕಟಿಸಿದ ಮೀಸಲಾತಿಯನ್ನೇ ಜಾರಿಗೊಳಿಸಿ ಸರಕಾರ ನಾಮನಿರ್ದೇಶಿಸಬೇಕು . ಒಂದು ವೇಳೆ ಈ ಹಿಂದೆ ಜಾರಿಗೊಳಿಸಿದ ಮೀಸಲಾತಿಯನ್ನು ರದ್ದುಗೊಳಿಸುವುದಾದರೆ ಮುಂದೆ ಆಗುವ ಅನುಯತ್ನಗಳಿಗೆ ಸರಕಾರ ಹಾಗೂ ಸರಕಾರದ ಜನಪ್ರತಿನಿಧಿಗಳ ಇದಕ್ಕೆ ನೇರ ಹೊಣೆ  ಆದ್ದರಿಂದ ಜಿಲ್ಲೆಯಲ್ಲಿ ಮಾದಿಗ ಜನಾಂಗ ಬಿ . ಜೆ . ಪಿ . ಪಕ್ಷದ ಪರವಾಗಿರುವುದನ್ನು ಚುನಾವಣೆಗಳಲ್ಲಿ ನಾವು ತೋರಿಸಿದ್ದೇವೆ . ಕಾರಣ , ಮಾನ್ಯ ಸಂಸದರಾದ ಕರಡಿ ಸಂಗಣ್ಣನವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡುವುದರ ಮೂಲಕ ಈ ಹಿಂದೆ ರಾಜ್ಯ ಸರಕಾರ ಹೊರಡಿಸಿದ ಮೀಸಲಾತಿಯನ್ನು ಮುಂದುವರೆಸಿ ಮಾದಿಗ ಸಮಾಜಕ್ಕೆ ರಾಜಕೀಯ ಸ್ಥಾನಮಾನಗಳನ್ನು ಒದಗಿಸುವಂತೆ ಇಡೀ ಸಮಾಜ ಹಾಗೂ ನಮ್ಮ ಸಂಘಟನೆಯು ಮನವಿ ಮಾಡುತ್ತದೆ   ಎಂದು  ಕರ್ನಾಟಕ ದಲಿತ ಹಿತರಕ್ಷಣಾ ವೇದಿಕೆಯ ಗವಿಸಿದ್ದಪ್ಪ ಕುಣಿಕೇರಿ, ಜಿ.ಕೆ.ಮಂಜುನಾಥ, ಮಾರ್ಕಂಡೆಪ್ಪ,  ಮುತ್ತಣ್ಣ ತಳಕಲ್, ಈರಣ್ಣ

 ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error