ಕೊಪ್ಪಳ ನಗರದ ವಸತಿ ರಹಿತರ ಕ್ಷಿಪ್ರ ಸಮೀಕ್ಷೆ : ಎನ್.ಜಿ.ಒಗಳಿಂದ ಪ್ರಸ್ತಾವನೆಗೆ ಆಹ್ವಾನ

ಕೊಪ್ಪಳ ನ. 20 : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ವಸತಿ ರಹಿತರ ಕ್ಷಿಪ್ರ ಸಮೀಕ್ಷೆ ಕೈಗೊಳ್ಳಬೇಕಾಗಿದ್ದು, ಅರ್ಹ ಎನ್.ಜಿ.ಒ.ಗಳಿಂದ ಪ್ರಸ್ತಾವನೆಗೆ ಆಹ್ವಾನಿಸಲಾಗಿದೆ.
ಡೇ-ನಲ್ಮ ಯೋಜನೆ ನಗರ ವಸತಿ ರಹಿತರಿಗೆ ಆಶ್ರಯ ಉಪ ಯೋಜನೆಯಡಿಯಲ್ಲಿ ಅರ್ಹ 3ನೇ/ ವ್ಯಕ್ತಿ ಸಂಸ್ಥೆಯ ಮೂಲಕ ಕೊಪ್ಪಳ ನಗರದ ವಸತಿ ರಹಿತರ ಕ್ಷಿಪ್ರ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಆದಕಾರಣ ನಗರದ ವಸತಿ ರಹಿತರನ್ನು ಗುರುತಿಸುವ ಕುರಿತು ಸ್ಥಳೀಯ ಎನ್.ಜಿ.ಒ/3ನೇ ವ್ಯಕ್ತಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದ್ದು, ಎನ್.ಜಿ.ಒ/ 3ನೇ ವ್ಯಕ್ತಿಗಳು ದರ್ಪಣ್ ಪೋರ್ಟಲ್‍ನಲ್ಲಿ ನೋಂದಣಿಯಾಗಿರಬೇಕು. ಸಮರ್ಪಕ ಮಾನವ ಸಂಪನ್ಮೂಲ ಹೊಂದಿರಬೇಕು. ಈ ವಿಷಯದಲ್ಲಿ ಜ್ಞಾನ, ಸಂಪರ್ಕ ಸಾಧನಗಳನ್ನು ಹೊಂದಿರಬೇಕು. ಅನುಭವವಿರುವವರಿಗೆ ಆಧ್ಯತೆ ನೀಡಲಾಗುವುದು. ಹೆಲ್ಪ್‍ಲೈನ್/ ಸಹಾಯವಾಣಿ ವ್ಯವಸ್ಥೆ ಹೊಂದಿದವರಿಗೆ ಪ್ರಧಾನ್ಯತೆ ನೀಡಲಾಗುವುದು. ಇತರೆ ಅವಶ್ಯಕ ಅಂಶಗಳನ್ನು ನಗರಸಭೆಯ ನಿರ್ದೇಶನದಂತೆ ಪ್ರಸ್ತಾವನೆಯನ್ನು ನ. 27 ರೊಳಗಾಗಿ ಅಥವಾ ಪ್ರಕಟಣೆಯ ದಿನಾಂಕದಿಂದ 07 ದಿನಗಳೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆಯ ಸಮುದಾಯ ಸಂಪರ್ಕ ಅಧಿಕಾರಿ ಮಂಜುನಾಥ ಬೆಲ್ಲದ್, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=======
ಕಂಪ್ಯೂಟರ್ ಡೆಸ್ಕ್‍ಟಾಪ್ ಪಬ್ಲಿಷಿಂಗ್ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಇವರ ವತಿಯಿಂದ ಇದೇ ತಿಂಗಳಲ್ಲಿ ಜರುಗಲಿರುವ ಕಂಪ್ಯೂಟರ್ ಡೆಸ್ಕ್‍ಟಾಪ್ ಪಬ್ಲಿಷಿಂಗ್ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಫೋಟೋಶಾಪ್, ಪೇಜ್ ಮೇಕರ್, ಕೋರಲ್ ಡ್ರಾ, ವೆಡ್ಡಿಂಗ್ ಆಲ್ಬಮ್, ಗ್ರೀಟಿಂಗ್ ಕಾರ್ಡ್, ವಿಸಿಟಿಂಗ್ ಕಾರ್ಡ್ ಮೇಕಿಂಗ್ ಜೊತೆಗೆ ಬ್ಯಾಂಕಿಂಗ್ ಮತ್ತು ಇತರೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ತರಬೇತಿ ಪಡೆಯಲು ಇಚ್ಛಿಸುವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9483485489, 9482188780 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
=======
ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಇವರ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಜರುಗಲಿರುವ ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಸಾವಯವ ಕೃಷಿ ಹಾಗೂ ಎರೆಹುಳು ತಯಾರಿ ಎಂಬ ಎರಡು ಪ್ರತ್ಯೇಕ ತರಬೇತಿಯನ್ನು ನೀಡಲಾಗುವುದು. ತರಬೇತಿಯಲ್ಲಿ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ತರಬೇತಿ ಪಡೆಯಲು ಇಚ್ಛಿಸುವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9483485489, 9482188780 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
=======
ಸಹಾಯಧನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳದೇ ಇರುವರಿಗೆ ಕಾನೂನು ರೀತ್ಯ ಸೂಕ್ತ ಕ್ರಮ
ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸ್ವಚ್ಛ ಭಾರತ್ ಯೋಜನೆಯಡಿ ಸಹಾಯಧನವನ್ನು ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳದೇ ಇರುವ ಫಲಾನುಭವಿಗಳ ವಿರುದ್ಧ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಸ್ವಚ್ಛ ಭಾರತ್ ಯೋಜನೆಯು ಒಂದು ಮಹತ್ವಪೂರ್ಣವಾದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಶೌಚಾಲಯರಹಿತ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಳ್ಳುವ ಸಲುವಾಗಿ ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನವನ್ನು ಒದಗಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು ಫಲಾನುಭವಿಗಳು ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ ಪ್ರಯುಕ್ತ, ಸ್ಥಾನಿಕ ಪರಿಶೀಲನೆ ಮಾಡಿ, ಶೌಚಾಲಯದ ಕಟ್ಟಡವನ್ನು ಅರ್ಹ ಫಲಾನುಭವಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ರೂ. 5000/-ಗಳನ್ನು ಒಂದನೇ ಕಂತಿನ ರೂಪದಲ್ಲಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿರುತ್ತದೆ.
ಆದರೆ, ಪ್ರೋತ್ಸಾಹಧನವನ್ನು ಪಡೆದುಕೊಂಡಿದ್ದರೂ ಸಹ ಇದುವರೆಗೂ ಶೌಚಾಲಯದ ಕಟ್ಟಡವನ್ನು ಕಟ್ಟಿಸಿಕೊಳ್ಳದೇ ಇರುವುದುಕಂಡು ಬಂದಿರುತ್ತದೆ. ಈ ಕುರಿತು ಸಂಬಂಧಿಸಿದ ಫಲಾನುಭವಿಗಳಿಗೆ ಈಗಾಗಲೇ ತಿಳುವಳಿಕೆ ಪತ್ರವನ್ನು ನೀಡಿ, ಶೌಚಾಲಯವನ್ನು ಕಟ್ಟಿಕೊಳ್ಳಲು ತಿಳಿಸಲಾಗಿದೆ. ಆದಾಗ್ಯೂ ಸಹ ಮನೆಗೆ ವೈಯಕ್ತಿಕ ಶೌಚಾಲಯವನ್ನು ಕಟ್ಟಿಸಿಕೊಳ್ಳದೇ ಬಯಲು ಶೌಚಾಲಯವನ್ನು ಉಪಯೋಗಿಸುತ್ತಿರುವುದು ಅನೈರ್ಮಲ್ಯತೆಗೆ ನೇರವಾಗಿ ಕಾರಣ ಹಾಗೂ ಸರ್ಕಾರದ ಮಹತ್ವಪೂರ್ಣ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಫಲರಾಗಿರುವುದಕ್ಕೆ ಶೌಚಾಲಯವನ್ನು ನಿರ್ಮಿಸಿಕೊಳ್ಳದೇ ಇರುವ ಫಲಾನುಭವಿಗಳೇ ನೇರ ಕಾರಣರಾಗಿರುತ್ತಾರೆ.
ಆದ್ದರಿಂದ ಸಹಾಯಧನವನ್ನು ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳದೇ ಇರುವ ಫಲಾನುಭವಿಗಳು 15 ದಿನಗಳೊಳಗಾಗಿ ನಿಮ್ಮ ಮನೆಯ ವೈಯಕ್ತಿಕ ಶೌಚಾಲಯದ ಕಟ್ಟಡವನ್ನು ಕಟ್ಟಿಸಿಕೊಂಡು ಅದರ ಭಾವಚಿತ್ರದೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಮಾಹಿತಿ ಒದಗಿಸಬೇಕು. ತಪ್ಪಿದಲ್ಲಿ ಅಂತಹವರ ಮೇಲೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಡೆದು ಕೊಂಡಿರುವ ರೂ. 5000/-ಪ್ರೋತ್ಸಾಹಧನದ ಮೊತ್ತಕ್ಕೆ ಫಲಾನುಭವಿಗಳ ಆಸ್ತಿಯ ಮೇಲೆ ಬೋಜಾಕೂಡಿಸಲಾಗುವುದು ಅಥವಾ ನಿಮ್ಮ ಮನೆಯ ನಳದ ಸಂಪರ್ಕವನ್ನು ಕಡಿತಗೊಳಿಸಲಾಗುವುದು/ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Please follow and like us:
error