ಕೊಪ್ಪಳ ನಗರದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ


ಕೊಪ್ಪಳ : ದಿ ೨೧.೦೮.೨೦೧೯ ಬುಧವಾರ ರಂದು ಕೊಪ್ಪಳ ನಗರದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಶ್ರೀ ತರಳುಬಾಳು ಶಾಖಾ ಮಠ ಸಾಣೇಹಳ್ಳಿ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಪೂಜ್ಯಶ್ರೀಗಳು ಸಂವಾದ ನಡೆಸಲಿದ್ದಾರೆ.
ಸಂಜೆ ೫ ಗಂಟೆಗೆ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದಿಂದ ಶಿವಶಾಂತವೀರ ಮಂಗಲಭವನದವರಗೂ ಸಾಮರಸ್ಯ ನಡಿಗೆ (ಪಾದಯಾತ್ರೆ)ಯಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸಲಿದ್ದಾರೆ. ಸಂಜೆ ೬ ಗಂಟೆಗೆ ಶಿವಶಾಂತವೀರ ಮಂಗಲಭವನದಲ್ಲಿ ಅನುಭಾವ ಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನ ಪೂಜ್ಯ ಶ್ರೀ ಜ.ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ವಹಿಸಲಿದ್ದಾರೆ, ಮುಖ್ಯಅತಿಥಿ ಉಪನ್ಯಾಸಕರಾಗಿ ಡಾ|| ಸಿದ್ದನಗೌಡ ಪಾಟೀಲ ಸಂಪಾದಕರು ಹೊಸತು ಪತ್ರಿಕೆ ಬೆಂಗಳೂರು ಇವರು ಆಗಮಿಸಿ ಕಲ್ಯಾಣ ರಾಜ್ಯ ಕನಸುಗಳು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮತ್ತು ಶ್ರೀಮತಿ ಸಾವಿತ್ರಿ ಮುಜುಮದಾರ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ಆಗಮಿಸಿ ಶರಣರ ಸಮಸಮಾಜ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮುಖ್ಯಅತಿಥಿಗಳಾಗಿ ರವರೆಂಡ್ ಜೇ. ರವಿಕುಮಾರ ಕ್ರೀಸ್ತ್ ಜ್ಯೋತಿ ಇಸಿಐ ಚರ್ಚ ಸಭಾಪಾಲಕರು ಕೊಪ್ಪಳ ಮತ್ತು ಮೌಲಾನ ಮಹ್ಮದ ಅಲಿ, ಇಮಾಯತಿ ಮಸೀದ್ ಫಯಜ್ ಕೊಪ್ಪಳ ಹಾಗೂ ಜೆ.ಎಂ. ವೀರಸಂಗಯ್ಯ ರೈತ ಸಂಘ ರಾಜ್ಯ ಕಾರ್ಯಾಧ್ಯಕ್ಷರು ಬೆಂಗಳೂರು ಇವರು ಆಗಮಿಸಲಿದ್ದಾರೆ.
ರಾತ್ರಿ ೮ ಗಂಟೆಗೆ ಶರಣರ ಜೀವನ ಚರಿತ್ರೆ ಆಧಾರಿತ ‘ಮೊಳಗೆ ಮಾರಯ್ಯ’ ಎಂಬ ನಾಟಕವನ್ನು ಸಾಣೇಹಳ್ಳಿಯ ಶಿವಸಂಚಾರ ನಾಟಕ ತಂಡದಿಂದ ಪ್ರದರ್ಶನಗೊಳ್ಳಲಿದೆ.
.

Please follow and like us:
error