ಕೊಪ್ಪಳ ನಗರದಲ್ಲಿ ದಿ.8 ರಿಂದ ಮುಂದಿನ 15 ದಿನ ಸ್ವಯಂಪ್ರೇರಿತ ಲಾಕ್ ಡೌನ್ ಗೆ ನಿರ್ಧಾರ : ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ :  ಕೊಪ್ಪಳದಲ್ಲಿ ಹೆಚ್ಚಾಗುತ್ತಿರುವ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹಿನ್ನೆಲೆ ನಗರದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ನಗರದ  ವಿವಿಧ ವರ್ತಕರು, ನಗರಸಭೆ ಸದಸ್ಯರು , ಗಣ್ಯರು ಸೇರಿದ ಸಭೆಯಲ್ಲಿ ನಿರ್ದಾರ ಮಾಡಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು ಎರಡು ಗಂಟೆಯ ನಂತರ ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟು ಬಂದ್ ಗೆ ಮಾಡಲು ಎಲ್ಲರೂ ನಿರ್ದರಿಸಿದ್ದಾರೆ.ಗ್ರಾಮೀಣ ಪ್ರದೇಶದಲ್ಲೂ ಕರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ  ವ್ಯಾಪಾರಸ್ಥರು ಈ ನಿರ್ದಾರಕ್ಕೆ ಬಂದಿದ್ದಾರೆ..ನಾಳೆ ದಿ 8 ರಿಂದ 15 ದಿನಗಳ ಕಾಲ ಲಾಕ್ ಡೌನ್ ಗೆ ಮುಂದಾದ ಜನತೆ ರೋಗ ಹರಡದಂತೆ ತಡೆಗಟ್ಟಲು ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಶಾಸಕ ರಾಘವೇಂದ್ರ ಹಿಟ್ನಾಳ ಮನವಿ ಮಾಡಿದ್ದಾರೆ

8 ನೇ ತಾರೀಖಿನಿಂದ 25ನೇ ತಾರೀಖಿನವರೆಗೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿದೆ

Please follow and like us:
error