ಕೊಪ್ಪಳ ನಗರಕ್ಕೆ ಆಗಮಿಸಿದ ವಾಜಪೇಯಿಯವರ ಚಿತಾ ಭಸ್ಮ 

ಕೊಪ್ಪಳ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಚಿತಾ ಭಸ್ಮ ಕಲಶ ನಗರಕ್ಕೆ  ಶನಿವಾರ ಮಧ್ಯಾಹ್ನ ಆಗಮಿಸಿದ್ದು,ಸ್ವಾಗತಿಸಿ ಬೈಕ್ ರ್ಯಾಲಿ ಮುಖಾಂತರ ಕೊಪ್ಪಳ ನಗರದ ವಿವಿಧ ವೃತ್ತಗಳ‌ ಮೂಲಕ ಮೆರವಣಿಗೆ ಮಾಡಲಾಯಿತು. 
ನಗರದ ಹೊರವಲಯದ ಹೊಸಪೇಟೆ  ರಸ್ತೆಯಲ್ಲಿ ಚಿತಾ ಭಸ್ಮವನ್ನು ವಾಹನ ಬಂದಾಗ ಸಂಸದ ಸಂಗಣ್ಣ ಕರಡಿ ಸಂಗಣ್ಣ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಚಿತಾ ಭಸ್ಮ ಕಲಶವನ್ನು ಸ್ವಾಗತಿಸಿದರು.
ಚಿತಾ ಭಸ್ಮ ಕಲಶಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.
ಚಿತಾ ಭಸ್ಮ ಕಲಶ ಹೊತ್ತಿದ್ದ ವಾಹನ ನಗರದ ಗಂಜ್ ಸರ್ಕಲ್​ನಿಂದ ಗಡಿಯಾರ ಕಂಬ ಸರ್ಕಲ್, ಅಶೋಕ ಸರ್ಕಲ್ ಬಳಸಿಕೊಂಡು ನಗರದ ವಿವಿಧ ರಸ್ತೆಗಳಲ್ಲಿ ಸಾಗಿತು. ನಂತರ ನಗರದ ಸಾರ್ವಜನಿಕ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ನಂತರ ಹಂಪಿಗೆ ಚಿತಾ ಭಸ್ಮ ಕಲಶದ ವಾಹನವನ್ನು ಬೀಳ್ಕೊಡಲಾಯಿತು.
Please follow and like us:
error

Related posts