ಕೊಪ್ಪಳ ತಾಲೂಕ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಲಿಂಗಣ್ಣ ಮೇಟಿ

linganna_meti_writer

ಕೊಪ್ಪಳ,೨೧- ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಬರಹಗಾರ ಲಿಂಗಣ್ಣ ಮೇಟಿ ಅವರನ್ನು ಸರ್ವಾನುಮತ ದಿಂದ ಆಯ್ಕೆಮಾಡಲಾಯಿತು ಎಂದು ಕನ್ನಡ ಸಾಹಿತ ಪರಿಷತ್ ತಾಲೂಕಾಧ್ಯಕ್ಷ ಗಿರೀಶ್ ಪಾನಗಂಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ನಗರದ ಪ್ರಮೋದ ಕಲ್ಯಾಣ ಮಂಟಪದಲ್ಲಿ ಜರುಗಿದ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ಡಾ/. ಪಾರ್ವತಿ ಪೂಜಾರ್, ವೀರಣ್ಣ ಹುರಕಡ್ಲಿ ಸೇರಿದಂತೆ ನಾಡಿನ ಹಲವಾರು ಸಾಹಿತಿ, ಕಲಾವಿದರ ಹೋರಾಟಗಾರರ ಹೆಸರು ಕೇಳಿ ಬಂದವಾದರೂ ಅಂತಿಮವಾಗಿ ಹಿರಿಯ ಸಂಗ್ರಾಹಕ ಲಿಂಗಣ್ಣ ಮೇಟಿ ಅವರ ಹೆಸರನ್ನೆ ಅಂತಿಮಗೊಳಿಸಲಾಯಿತು.
ಕೊಪ್ಪಳ ತಾಲೂಕಿನ ಕಲಾದೇವತೆಯ ತವರೂರಾದ ಕಿನ್ನಾಳ ಗ್ರಾಮದಲ್ಲಿ ಸಮ್ಮೇಳನ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಕಾರ್ಯದರ್ಶಿ ಸಮಿತಿ ಸದಸ್ಯರಾದ ರಮೇಶ ತುಪ್ಪದ್, ನಾಗರಾಜ ನಾಯಕ್ ಡೊಳ್ಳಿನ್,
ಬಸವರಾಜ್ ಶಿರಗುಂಪಿ ಶೆಟ್ರ, ಶಿವಕುಮಾರ್ ಕುಕನೂರ್, ರಾಕೇಶ್ ಕಾಂಬ್ಳೇಕರ್, ಬಸಪ್ಪ ದೇಸಾಯಿ ಇತರರು ಇದ್ದರು.

Leave a Reply