ಕೊಪ್ಪಳ ತಾಲೂಕಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಶೈಕ್ಷಣಿಕ ಕಾರ್ಯಗಾರ

ಕೊಪ್ಪಳ, ೦೩-ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಇಲಾಖೆ ಸಹಕಾರ ನೀಡಿದಾಗ ಮಾತ್ರ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲೂ ಸಾಧ್ಯವೇಂದು ಹೈದ್ರಾಬಾದ್ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಹೇಳಿದರು.
ಅವರು ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹೈದ್ರಾಭಾದ್ ಕರ್ನಾಟಕದಂತಹ ಹಿಂದೂಳಿದ ಪ್ರದೇಶದಲ್ಲಿ ಶೃಕ್ಷಣಿಕ ಸೇವೆ ಮಾಡುವಂತಹದ್ದು ಸವಾಲಿನ ಸಂಗತಿಯಾಗಿದೆ. ಶಿಕ್ಷಣ ಇಲಾಖೆ ದಿನಕೊಂದು ನೂತನ ನಿಯಮದಿಂದ ಸಾಕಷ್ಟು ಗೊಂದಲು ಉಂಟಾಗುತ್ತದೆ ಸರಕಾರ ಇಲಾಖೆಯಿಂದ ಕಾನೂನು ಅಡಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲಾ ನವೀಕರಣ ಹಾಗು ಸರ್ಕಾರದಿಂದ ಬರುವ ಪುಸ್ತಕ ಹಂಚಿಕೆ, ಇಲಾಖೆಯಿಂದ ಸೂಚನೆಗಳು ನೋಟಿಸ್ ನೀಡುವಾಗ ಖಾಸಗಿ ಶಾಲೆಗಳಿಗೆ ಸಹಕಾರ ನೀಡಿಬೇಕು. ಸರ್ಕಾರ ಮಾಡದಂತ ಕೆಲಸವನ್ನು ಖಾಸಿಗಿ ಶಾಲೆಗಳು ಗ್ರಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವಂತಹ ಕೆಲಸಗಳನ್ನು ಮಾಡುತ್ತೆವೆ ಎಂದರು.
ಯಾವುದೇ ಎರಡು ಮೂರು ದೊಡ್ಡ ಶಾಲೆಗಳನ್ನು ಗಮನದಲ್ಲಿ ಇಟ್ಟು ಕೊಂಡು ಸರ್ಕಾರ ನಿಯಮ ರೂಪಿಸಿದರೆ ಗ್ರಾಮೀಣ ಭಾಗದಲ್ಲಿ ಕಷ್ಟ ಪಟ್ಟು ಶಿಕ್ಷಣ ನೀಡುವ ಶಲೆಗಳಿಗೆ ತೊಂದರೆ ಮಾಡುತ್ತೆದೆ ಅದನ್ನು ಗಮನದಲ್ಲಿ ಇರಿಸಿಕೊಂಡು ಇಲಾಖೆ ನಿಯಮಗಳನ್ನು ರೂಪಿಸಿ ಸಹಕರಿಸಿ ಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಗಾರ ಉದ್ಘಾಟಿಸಿದ ಕೇತ್ರ ಶಿಕ್ಷಣಾಧಿಕಾರಿ ಶ್ರೀ ಮತಿ ಶೋಭಾ ಬಾಗೇವಾಡಿ ಮಾತನಾಡಿ ಕಾನೂನ ಚೌಕಟ್ಟಿನಲ್ಲಿ ಕಾನೂನು ಬದ್ದವಾಗಿ ಶೈಕ್ಷಣಿಕ ಸೇವೆ ಮಾಡಿ ಎಲ್ಲಾ ದಾಖಲಾತಿಗಳನ್ನು ಮತ್ತು ನಿಯಮನುಸಾರ ಶಾಲೆ ನಡೆಸಿ ಅಂದಾಗ ಮಾತ್ರ ಶಾಲೆಯಿಂದ ಉತ್ತಮ ಶಿಕ್ಷಣ ಸಾದ್ಯೆ ಎಂದರು. ಸರ್ಕಾರದ ನಿಯಮಗಳು ಮಕ್ಕಳ ರಕ್ಷಣೆ ಹಾಗೂ ಅವರಿಗೆ ಉತ್ತಮ ಶಿಕ್ಷಣದ ದೃಷ್ಟಿ ಹಾಗೂ ಕಡ್ಡಾಯ ಶಕ್ಷಣಕ್ಕಾಗಿ ರೂಪಿತವಾಗಿರುತ್ತದೆ. ಕಾನೂನು ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಹಕ್ಕು ವಿದ್ಯಾರ್ಥಗಳಿಗೆ ಅಪ್ಲೋಡ್ ಮಾಡುವಾಗ ವಹಿಸಬೇಕಾದ ತಾಂತ್ರಿಕ ಎಚ್ಚರಿಕೆಗಳ ಕುರಿತಾಗಿ ಹನುಮಸಾಗರದ ಉರ್ದು ಶಾಲೆ ಮುಖ್ಯ ಶಿಕ್ಷಕ ಎಮ್.ಎಸ್.ಬಡದಾನಿ ಮಾತನಾಡಿದರು. ಶಾಲೆಗಳಿಲ್ಲಿ ಇಡಬೆಕಾದ ದಾಖಲೆಗಳು ಮತ್ತು ನಿರ್ವಹಣೆ ಕುರಿತಾಗಿ ನಿವೃತ್ತ ಉಪಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಹಾಗೂ ಎಸ್.ಟಿ.ಎಸ್ ಮತ್ತು ಆರ್.ಡಿ.ಇ.ಆನೆಲೃನ್ ಕಾರ್ಯದ ಬಗ್ಗೆ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅನುದಾನ ರಹಿತ ಶಾಲಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಪ್ರಹ್ಲಾದ ಅಗಳಿ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಶಿವಕುಮಾರ ಕುಕನುರ ಉಪಸ್ಥಿತರಿದ್ದರು. ಬಸವರಾಜ ಶಿರಗುಂಪಿ ಶೆಟ್ರ ನಿರುಪಿಸಿದರು. ರಾಜು ಚಿಲುವಾಡಿಗಿ ಸ್ವಾಗತಿಸಿದರು. ಶಕುಂತಲಾ ಬಿನ್ನಾಳ ತಮಡ ಪ್ರಾರ್ಥನೆ ಸಲ್ಲಿಸಿದ್ದರು. ಕೊನೆಯಲ್ಲಿ ಮಂಜುನಾಥ ಅಂಗಡಿ ವಂದಿಸಿದರು.

Please follow and like us:
error