ಕೊಪ್ಪಳ ಡಿಸಿ‌ ಪಿ.ಸುನೀಲ್ ಕುಮಾರ್ ವರ್ಗಾವಣೆ: ಕಪ್ಪು ಪಟ್ಟಿಕಟ್ಟಿಕೊಂಡು ಪ್ರತಿಭಟನೆ

ಕೊಪ್ಪಳ : ದಕ್ಷ ಆಡಳಿತ ನಡೆಸಿದ ಕೊಪ್ಪಳ ಡಿಸಿ ವರ್ಗಾವಣೆ ಖಂಡಿಸಿ ನಗರಸಭೆ ಸದಸ್ಯನ ನೇತೃತ್ವದಲ್ಲಿ ‌ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಗಂಗಾವತಿ ತಹಶಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯ ಎಫ್ ರಾಘವೇಂದ್ರ & ಸಾರ್ವಜನಿಕರು, ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ನಗರಸಸಭೆ ಸದಸ್ಯ ಎಫ್ .ರಾಘವೇಂದ್ರ ಮಾತನಾಡಿ, ನಮ್ಮ ಜಿಲ್ಲೆಯ ನೆಚ್ಚಿನ ಡಿಸಿ ಪಿ.ಸುನೀಲ್ ಕುಮಾರ್ ಅವರು, ಭ್ರಷ್ಟಾಚಾರ ನಿಯಂತ್ರಣ ಮಾಡಿ ದಕ್ಷ ಅಧಿಕಾರಿಯಾಗಿ ಆಡಳಿತ ನಡೆಸಿದ್ದಾರೆ. ಇನ್ನೂ ಕೋವಿಡ್ – 19 ನಿಯಂತ್ರಣದಲ್ಲಿ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.‌ ಇಷ್ಟೇ ಅಲ್ಲದೇ ಐತಿಹಾಸಿಕ ಸ್ಥಳಗಳಲ್ಲಿ ತಲೆಎತ್ತಿದ್ದ ಅಕ್ರಮ ರೆಸಾರ್ಟ್ ಗಳಲ್ಲಿ ಜೂಜು, ಗಾಂಜಾ ಮಾಫಿಯಾ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ವು. ಇದನ್ನು ಗಮನಿಸಿದ ಡಿಸಿ ಪಿ.ಸುನೀಲ್ ಕುಮಾರ್ ಯಾರ ಒತ್ತಡಕ್ಕೆ ಮಣಿಯದೇ ಅಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸಿದ್ರು. ಇಂತಹ ಪ್ರಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಸರಿ ಅಲ್ಲ. ವರ್ಗಾವಣೆ ಹಿಂದೆ ಕೆಲ ಶಾಸಕರ , ಮಾಫಿಯಾದವರ ಕೈವಾಡ ಇದ್ದು, ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ರು. ಇದ್ರಿಂದ ಜಿಲ್ಲಾಧಿಕಾರಿಗಳನ್ನು ಕೊಪ್ಪಳದಲ್ಲಿಯೇ ಮುಂದುವರೆಸಬೇಕು. ಒಂದು ವೇಳೆ ಡಿಸಿ ಪಿ.ಸುನೀಲ್ ಕುಮಾರ್ ಅವರನ್ನು ‌ಕೊಪ್ಪಳದಲ್ಲಿಯೇ ಮುಂದುವರೆಯಲು ಬಿಡದಿದ್ರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ರು.‌

Please follow and like us:
error