ಕೊಪ್ಪಳ, ಜೂ.: ಕೊಪ್ಪಳ ನಗರಸಭೆಗೆ ವ್ಯಾಪ್ತಿಯ ಜೆ.ಪಿ ಮಾರುಕಟ್ಟೆಯಲ್ಲಿ ಕಲಬುರ್ಗಿ ಕ್ಯಾಬಿನೆಟ್ ಯೋಜನೆಯಡಿಯಲ್ಲಿ ಹೊಸದಾಗಿ ನಿರ್ಮಿಸಿರುವ 66 ತರಕಾರಿ ಕಟ್ಟೆಗಳನ್ನು ಜೂ.08 ರಂದು ಬಾಡಿಗೆ ಬಹಿರಂಗ ಹರಾಜು ಮಾಡಲಾಗಿದ್ದು ಇದರಲ್ಲಿ 21 ಜನ ಯಶಸ್ವಿ ಬಿಡ್ದಾರರೆಂದು ಆಯ್ಕೆಯಾಗಿರುತ್ತಾರೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಬಾಡಿಗೆ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ 33 ಜನ ಬಿಡ್ಡುದಾರರು ಭಾಗವಹಿಸಿದ್ದು 14 ಕಟ್ಟೆಗಳಿಗೆ ತಲಾ ಒಬ್ಬರಂತೆ ಅರ್ಜಿ ಸಲ್ಲಿಸಿದ್ದರಿಂದ ಇವರಿಗೆ ಸರ್ಕಾರಿ ದರಕ್ಕೆ ತರಕಾರಿ ಕಟ್ಟೆಗಳನ್ನು ಮಂಜೂರು ಮಾಡಲಾಗಿದೆ. ಉಳಿದ 7 ತರಕಾರಿ ಕಟ್ಟೆಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ತರಕಾರಿ ಕಟ್ಟೆ ಸಂಖ್ಯೆ 06 ಇದರ ಸರ್ಕಾರಿ ಸವಾಲು 1443 ರೂ. ಆಗಿದ್ದು 6200 ರೂ. ಹೆಚ್ಚಿನ ಬಿಡ್ ದರಕ್ಕೆ, ತ.ಕ.ಸಂ.7 ಇದರ ಸರ್ಕಾರಿ ಸವಾಲು 1503 ರೂ. ಆಗಿದ್ದು 1650 ರೂ. ಹೆಚ್ಚಿನ ಬಿಡ್ಗೆ, ತ.ಕ.ಸಂ.09 ಇದರ ಸರ್ಕಾರಿ ಸವಾಲು 1683 ರೂ. ಆಗಿದ್ದು 2800 ರೂ. ಬಿಡ್ಗೆ, ತ.ಕ.ಸಂ.19 ಇದರ ಸರ್ಕಾರಿ ಸವಾಲು 5680 ರೂ. ಆಗಿದ್ದು 6100 ರೂ. ಬಿಡ್ಗೆ, ತ.ಕ.ಸಂ.20 ಸರ್ಕಾರಿ ಸವಾಲು 4855 ರೂ. ಆಗಿದ್ದು 19,900 ರೂ. ಬಿಡ್ಗೆ, ತ.ಕ.ಸಂ.25 ಸರ್ಕಾರಿ ಸವಾಲು 5049 ರೂ. ಆಗಿದ್ದು 19,100 ರೂ. ಬಿಡ್ಗೆ ಮತ್ತು ತ.ಕ.ಸಂ.59 ಸರ್ಕಾರಿ ಸವಾಲು 1341 ರೂ. ಆಗಿದ್ದು 4800 ರೂ. ಬಿಡ್ಗೆ ಮಂಜೂರು ಮಾಡಲಾಗಿದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
