fbpx

ಕೊಪ್ಪಳ ಜಿಲ್ಲೆ 141 ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಜಿಲ್ಲೆಯಲ್ಲಿಂದು ಕರೋನಾ ಮಹಾಸ್ಪೋಟವಾಗಿದೆ. ಇಂದು ಒಂದೇ ದಿನ ೧೪೧ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಅತೀ ಹೆಚ್ಚು ೧೨೧ ಗಂಗಾವತಿ ತಾಲೂಕಿನಲ್ಲಿ ವರದಿಯಾಗಿವೆ. ೧೫ ಪ್ರಕರಣಗಳು ಕೊಪ್ಪಳ ತಾಲೂಕಿನಲ್ಲಿ, ನಾಲ್ಕು ಕುಷ್ಟಗಿ ಹಾಗೂ ೧ ಯಲಬುರ್ಗಾ ತಾಲ್ಲೂಕಿನಲ್ಲಿ ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೮೭೯ ತಲುಪಿದೆ. ಜಿಲ್ಲೆಯಲ್ಲಿ ಟೆಸ್ಟಿಂಗ್ ಹೆಚ್ಚಾಗಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನೂ ೨೩೨ ಟೆಸ್ಟಿಂಗ್ ರಿಜಲ್ಟ್ ಗಳು ಬರುವುದು ಬಾಕಿ ಇದೆ.

Please follow and like us:
error
error: Content is protected !!